ಅಫ್ಘಾನಿಸ್ತಾನದಲ್ಲಿ ಐಎಸ್ ಉಗ್ರರಿಂದ 35 ಮಂದಿ ನಾಗರಿಕರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

ISIS--01

ಕಾಬೂಲ್, ಸೆ.11-ಯುದ್ಧ ಮತ್ತು ಹಿಂಸಾಚಾರದಿಂದ ತತ್ತರಿಸಿರುವ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಉತ್ತರ ಭಾಗದಲ್ಲಿರುವ ಜಾವ್‍ಝಾನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ತಾಲಿಬಾನ್ ಉಗ್ರರು 35ಕ್ಕೂ ಹೆಚ್ಚು ನಾಗರಿಕರನ್ನು ಅಪಹರಿಸಿದ್ದಾರೆ.
ಎರಡೂ ಬಣಗಳ ಉಗ್ರರು ಈ ಪ್ರಾಂತ್ಯದ ಕುಶ್‍ಟಿಪಾ ಮತ್ತು ಡರ್ಜಾಬ್ ಜಿಲ್ಲೆಗಳಲ್ಲಿ ಪ್ರತ್ಯೇಕ ಚೆಕ್‍ ಪೋಸ್ಟ್ ಗಳನ್ನು ನಿರ್ಮಿಸಿ ಸ್ಥಳೀಯ ನಾಗರಿಕರನ್ನು ವಶಕ್ಕೆ ತೆಗೆದುಕೊಂಡು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ವಿರೋಧಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಹಾಗೂ ಭದ್ರತಾಪಡೆಗಳಿಗೆ ಮಾಹಿತಿ ನೀಡುತ್ತಿದಾರೆ ಎಂಬ ಆರೋಪದ ಮೇಲೆ 35ಕ್ಕೂ ಹೆಚ್ಚು ಮಂದಿಯನ್ನು ಉಗ್ರರು ಅಪಹರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಹೃತರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಅವರ ರಕ್ಷಣೆಗಾಗಿ ಭದ್ರತಾಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ.

Facebook Comments

Sri Raghav

Admin