ಅಫ್ಜಲ್ ಗುರು ಮರಣದಂಡನೆಗೆ ಪ್ರತೀಕಾರವಾಗಿ ನಗರೋಟಾ ದಾಳಿ : ನೋಟ್ ಮೇಲೆ ಉಗ್ರರ ಸಂದೇಶ

ಈ ಸುದ್ದಿಯನ್ನು ಶೇರ್ ಮಾಡಿ

Afzal-Guru-0001

ನವದೆಹಲಿ, ಡಿ.30-ಅಫ್ಜಲ್ ಗುರು ಮರಣದಂಡೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ-ಇದು ಜಮ್ಮುವಿನ ನಗರೋಟಾ ಎನ್‍ಕೌಂಟರ್‍ನಲ್ಲಿ ಹತರಾದ ಆರು ಭಯೋತ್ಪಾದಕರ ಬಳಿ ಪತ್ತೆಯಾದ ನೋಟಿನ ಮೇಲೆ ಕಂಡುಬಂದಿರುವ ಸಂದೇಶವಾಗಿದೆ. ಇದರೊಂದಿಗೆ ಈ ದಾಳಿ ಇದೇ ಪಾಕಿಸ್ತಾನ ಮೂಲದ ಜೈಷ್-ಎ-ಮಹಮದ್ ಕೈವಾಡ ಇರುವುದು ಸಾಬೀತಾಗಿದೆ.
ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುಗೆ ನೇಣು ಹಾಕಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಉಗ್ರನೊಬ್ಬನ ಬಳಿ ಪತ್ತೆಯಾದ 500 ರೂ. ನೋಟಿನ ಮೇಲೆ ಉರ್ದುವಿನಲ್ಲಿ ಬರೆಯಲಾಗಿದೆ.

ಪಠಾಣ್‍ಕೋಟ್ ವಾಯು ನೆಲೆ ಮೇಲೆ ಭಯಾನಕ ದಾಳಿ ನಡೆಸಿದ್ದ ಜೆಇಎಂ ಉಗ್ರರೇ ನಗರೋಟಾ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ ಎಂಬುದಕ್ಕೆ ಇದು ಪುರಾವೆ ಒದಗಿಸುತ್ತದೆ ಎಂದು ಬೇಹುಗಾರಿಕೆ ದಳದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.  ಕೆಲಕಾಲ ತಟಸ್ಥಗೊಂಡಿದ್ದ ಜೆಇಎಂ ಉಗ್ರಗಾಮಿಗಳು ನಗರೋಟಾ ದಾಳಿ ಮೂಲಕ ಮತ್ತೆ ಸಕ್ರಿಯರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಂದೆಡೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ಜೆಇಎಂ ಸೇರಿದಂತೆ ಕೆಲವು ಉಗ್ರ ಬಣಗಳು ಮತ್ತೆ ದಾಳಿ ತೀವ್ರಗೊಳಿಸಿವೆ.

ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆಯುತ್ತಿರುವ ನಡೆಯುತ್ತಿರುವ ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಸೇನೆಯನ್ನು ಸನ್ನದ್ಧಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin