ಅಬುಧಾಬಿ ರಾಜಕುಮಾರ-ಮೋದಿ ಭೇಟಿ : 5 ಮಹತ್ವದ ಒಪ್ಪಂದಕ್ಕೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Abudabi

ಅಬುಧಾಬಿ, ಫೆ.11-ಮಧ್ಯಪ್ರಾಚ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಬುಧಾಬಿ ರಾಜಕುಮಾರ ಮಹಮದ್ ಬಿನ್ ಜಯೆದ್ ಅಲಿ ನಹ್ಯಾನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ವೃದ್ದಿ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು. ಇದೇ ವೇಳೆ ತೈಲ ಒಡಂಬಡಿಕೆ ಸೇರಿದಂತೆ ಐದು ಪ್ರಮುಖ ಒಪ್ಪಂದಗಳಿಗೆ ಸಂಯುಕ್ತ ಅರಬ್ ಗಣರಾಜ್ಯ-ಯುಎಇ ಜೊತೆ ಮೋದಿ ಸಹಿ ಹಾಕಿದರು.

ಜೋರ್ಡಾನ್‍ನಿಂದ ಇಲ್ಲಿಗೆ ಅರಂಭಿಸಿ ತಮ್ಮ ಎರಡನೇ ಪ್ರವಾಸ ಹಂತದ ಪ್ರವಾಸ ಆರಂಭಿಸಿದ ಮೋದಿ ಭೇಟಿಯಿಂದ ಉಭಯ ದೇಶಗಳ ನಡುವೆ ಬಾಂಧವ್ಯ ಬಲವರ್ಧನೆಗೊಂಡಿದೆ. ತೈಲ ಸಮೃದ್ಧ ರಾಷ್ಟ್ರದಲ್ಲಿ ಭಾರತದ ಸಂಸ್ಥೆಗಳಿಗೆ ಶೇ.10ರಷ್ಟು ಪಾಲುದಾರಿಕೆ ನೀಡುವ ಐತಿಹಾಸ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಮಾಡಿವೆ. ಇದರೊಂದಿಗೆ ತೈಲ ಉದ್ಯಮದಲ್ಲೂ ಭಾರತದ ಪ್ರಾಬಲ್ಯ ವೃದ್ದಿಗೆ ಸಹಕಾರಿಯಾಗಿದೆ.  ಈಗಾಗಲೇ ಪ್ಯಾಲೆಸ್ತೀನ್ ಭೇಟಿಯಲ್ಲೂ ಭಾರತದ ಮಹತ್ವವನ್ನು ಸಾಬೀತು ಮಾಡುವಲ್ಲಿ ಯಶಸ್ವಿಯಾದ ಪ್ರಧಾನಿ ಮೋದಿ ಯುಎಇ ಜೊತೆ ನವ ಬಾಂಧವ್ಯದ ಬೆಸುಗೆಗೆ ಮುನ್ನುಡಿ ಬರದಿದ್ದಾರೆ.

Facebook Comments

Sri Raghav

Admin