ಅಬ್ದುಲ್ಲಾ ಮಹಮದ್ ಫರ್ಮಾಜೂ ಸೋಮಾಲಿಯಾದ ನೂತನ ಅಧ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Somalia--01

ಮೊಗದಿಶು, ಫೆ.9- ಭಯೋತ್ಪಾದನೆ ಚಟುವಟಿಕೆ ಮತ್ತು ಹಿಂಸಾಚಾರದಿಂದ ನಲುಗುತ್ತಿರುವ ಸೋಮಾಲಿಯಾದ ನೂತನ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಅಬ್ದುಲ್ಲಾ ಮಹಮದ್ ಫರ್ಮಾಜೂ ಅಧಿಕಾರ ವಹಿಸಿಕೊಂಡಿದ್ದಾರೆ.   ಅಧ್ಯಕ್ಷರಾಗಿದ್ದ ಹಸನ್ ಶೇಖ್ ಮಹಮದ್ ನಿನ್ನೆ ನಡೆದ ಎರಡು ಸುತ್ತುಗಳ ಮತ ಎಣಿಕೆ ಬಳಿಕ ಪರಾಭವಗೊಂಡರು. ಸೋಮಾಲಿಯಾ ಮತ್ತು ಅಮೆರಿಕ ಪೌರತ್ವ ಹೊಂದಿರುವ ಫರ್ಮಾಜುರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಭೀಕರ ಬರಗಾಲ ಜೊತೆಗೆ ಹಲವಾರು ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕಿರುವ ಸೋಮಾಲಿಯಾ ಜನರ ಹಿತಾಸಕ್ತಿ ರಕ್ಷಿಸುವ ದೊಡ್ಡ ಹೊಣೆಗಾರಿಕೆ ಅವರ ಮೇಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin