ಅಭಿವೃದ್ಧಿ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ : ಉ.ಕ.ಹೋರಾಟ ಸಮಿತಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

1
ಬೆಳಗಾವಿ,ಅ1- ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೂಡಲೇ ರಾಜ್ಯ ಸರಕಾರ ಮುಂದಾಗಬೇಕು ಇಲ್ಲವೇ ಪ್ರತ್ಯೇಕ ರಾಜ್ಯ ಒಡೆದು ಕೊಡಬೇಕು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಇಂದು ಪ್ರತಿಭಟನೆ ನಡೆಸಿತು.ಉತ್ತರದ ಜಿಲ್ಲೆಗಳಿಗೆ ಅಭಿವೃದ್ಧಿಯ ಪ್ರಾಧಾನ್ಯತೆ ನೀಡಿ ಇಲ್ಲವೇ ನಮಗೆ ಪ್ರತ್ಯೇಕ ಸ್ಟೇಟ್ ಹುಡ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ.

ದಕ್ಷಿಣದ ಕಾವೇರಿ ಬಗ್ಗೆ ವಿಶೇಷ ಅಧಿವೇಶನ ನಡೆಸುವ ಸರಕಾರ ಮಹಾದಾಯಿ ಹೋರಾಟಕ್ಕೆ ಅಧಿವೇಶನ ಕರೆಯಲು. ಕೃಷ್ಣ ಕೊಳ್ಳದ ಸಮಸ್ಯೆ ಸರಕಾರ ಗಂಭೀರ ಪರಿಗಣಿಸಿಲ್ಲ. ಇಲ್ಲಿನ ಆಡಳಿತಾತ್ಮಕ ಸುಧಾರಣೆ, ಜನರ ಸಮಸ್ಯೆಗಳ ಬಗ್ಗೆ ಗಮನಹರಿಸದ ಸರಕಾರ ರಾಜ್ಯ ಒಡೆದು ಬೆಳಗಾವಿ ರಾಜ್ಯ ಮಾಡಿಕೊಡಲಿ ಎಂದು ಆಗ್ರಹಿಸಿದ್ದಾರೆ.ಪ್ರತಿಭಟನೆಯಲ್ಲಿ ಅಡಿವೇಶ ಇಟಗಿ, ಭೀಮಪ್ಪ ಗಡಾದ, ನಿಲೇಶ ಬನ್ನೂರ, ಅಣ್ಣಪೂರ್ಣ ನಿರ್ವಾಣಿ, ವಿಲೀನ ತಾರಿಹಾಳ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin