ಅಭ್ಯಾಸ ಪಂದ್ಯ : ನ್ಯೂಜಿಲೆಂಡ್ – ಮುಂಬೈ ಪಂದ್ಯ ಡ್ರಾನಲ್ಲಿ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

nz-mumbai
ನವದೆಹಲಿ, ಸೆ.18- ನ್ಯೂಜಿಲೆಂಡ್ ಹಾಗೂ ಮುಂಬೈ ತಂಡಗಳ ವಿರುದ್ಧ ನಡೆದ ಅಭ್ಯಾಸ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಮುಂಬೈ ತಂಡದ ನಾಯಕ ಅದಿತ್ಯ ತಾರೆ (53), ಕೆ.ಆರ್.ಪವಾರ್(100), ಎಸ್.ಎ.ಯಾದವ್ (103) ಹಾಗೂ ಎಸ್.ಎ.ಲಾಡ್ (ಅಜೇಯ 100)ರ ನೆರವಿನಿಂದ ಮುಂಬೈನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ  464 ರನ್‌ಗಳಿಗೆ ಡಿಕ್ಲೇರ‍್ಡ್ ಮಾಡಿಕೊಳ್ಳುವ ಮೂಲಕ 140 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಎರಡನೇ ಇನ್ನಿಂಗ್ಸ್‌ನ್ನು ಆರಂಭಿಸಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಮುಂಬೈನ ದಾಳಿಯ ಎದುರು ತಿಣುಕಾಡಿ 100 ರನ್‌ಗಳಾಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಲುಕ್ ರೋಚಿ ( 84 ರನ್, 15 ಬೌಂಡರಿ, 1 ಸಿಕ್ಸರ್) ಆಕರ್ಷಕ ಆಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ನ್ಯೂಜಿಲೆಂಡ್ 124 ರನ್‌ಗಳನ್ನು ಗಳಿಸಿದ್ದು ರೋಚಿ ಹಾಗೂ ಬೋಲ್ಟ್ ಅವರು ಕ್ರೀಸ್‌ನಲ್ಲಿದ್ದು ಪಂದ್ಯವು ಬಹುತೇಕ ಡ್ರಾನಲ್ಲಿ ಅಂತ್ಯಗೊಳ್ಳುವ ಲಕ್ಷಣಗಳಿವೆ.

► Follow us on –  Facebook / Twitter  / Google+

Facebook Comments

Sri Raghav

Admin