ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ : ರಾಹುಲ್ ಗಾಂಧಿ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Panjab-CB

ಪಂಜಾಬ್. ಜ.27 : ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಇಂದು ಪಂಜಾಬ್ ನ ಮಾಜಿತಾದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ, ರಾಹುಲ್ ಗಾಂಧಿ ಸದ್ಯ ಅಧಿಕಾರ ನಡೆಸುತ್ತಿರುವ ಅಕಾಲಿದಳ ರಾಜ್ಯವನ್ನು ನಾಶಮಾಡಿದೆ. ಹೀಗಾಗಿ ಪಂಜಾಬ್ ನಲ್ಲಿ ಪಂಜಾಬಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದ್ದಾರೆ.  ಎಸ್‌ಎಡಿ, ಬಿಜೆಪಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಅಮರೀಂದರ್ ಸಿಂಗ್ ಅವರು ಮುಖ್ಯಮಂತ್ರಿಯಾದರೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರ ರೈತರಿಗೆ ಅಗತ್ಯ ನೆರವು ಹಾಗೂ ನೀರು ಒದಗಿಸದ ಕಾರಣ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಟೀಕಿಸಿದರು.

ಪಂಜಾಬ್ ನಲ್ಲಿ ಶೇ. 70 ರಷ್ಟು ಯುವಕರು ಮಾದಕ್ಯ ವ್ಯಸನಿಗಳಾಗಿದ್ದಾರೆ ಎಂದು ವರ್ಷದ ಹಿಂದೆ ಹೇಳಿದ್ದೆ, ಆ ವೇಳೆ ಬಾದಲ್ ನನ್ನನ್ನು ಹಾಸ್ಯ ಮಾಡಿದ್ದರು. ಆದರೆ ಈಗ ಇಡೀ ಪಂಜಾಬ್ ಅದರಲ್ಲಿ ಮುಳುಗಿದೆ ಎಂದು ರಾಹುಲ್ ಹೇಳಿದ್ದಾರೆ. ಪಂಜಾಬ್ ನಲ್ಲಿರುವ ಡ್ರಗ್ ಮಾಫಿಯಾ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದಾಗಿ, ಆ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ರಾಜ್ಯದ ರೈತರು ಕಂಗಲಾಗಿದ್ದಾರೆ, ಆಡಳಿತದಲ್ಲಿರುವ ಸರ್ಕಾರ ಅವರೆಡೆಗೆ ಗಮನ ಹರಿಸುತ್ತಿಲ್ಲ, ಬಾದಲ್ ಅವರು ಕೇವಲ ಅವರ ಸಂಬಂಧಿಕರು ಹಾಗೂ ಹತ್ತಿರದವರಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iO

Facebook Comments

Sri Raghav

Admin