ಅಮರ್ ರಹೇ ಗುರ್‍ನಾಮ್ ಸಿಂಗ್ : ಪಾಕ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಬಿಎಸ್‍ಎಫ್ ಯೋಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Gurunam-Singh

ಜಮ್ಮು, ಅ.23-ಕಾಶ್ಮೀರದ ಕತುವಾ ಜಿಲ್ಲೆಯ ಹೀರಾನಗರ ಸೆಕ್ಟರ್‍ನಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧ ಗುರ್‍ನಾಮ್ ಸಿಂಗ್(26) ಕೊನೆಯುಸಿರೆಳೆದಿದ್ದಾರೆ.  ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಂಗ್ ನಿನ್ನೆ ರಾತ್ರಿ ಮೃತಪಟ್ಟರು. ಪಾಕಿಸ್ತಾನ ರೇಂಜರ್‍ಗಳು ಶುಕ್ರವಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದರು. ಬಿಎಸ್‍ಎಫ್ ಯೋಧರೂ ಪ್ರತಿದಾಳಿ ಮೂಲಕ ದಿಟ್ಟ ಉತ್ತರ ನೀಡಿದ್ದರು.ಗುಂಡಿನ ಚಕಮಕಿಯಲ್ಲಿ ತೀವ್ರ ಗಾಯಗೊಂಡ ಗುರ್‍ನಾಮ್ ಸಿಂಗ್‍ರನ್ನು ಕತುವಾದಿಂದ 90 ಕಿ.ಮೀ. ದೂರದಲ್ಲಿರುವ ಜಮ್ಮುವಿಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಿಂಗ್ ಕೊನೆಯುಸಿರೆಳೆದರು ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.  ಬಿಎಸ್‍ಎಫ್ ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ ಏಳು ರೇಂಜರ್‍ಗಳು ಹತರಾದರು.

► Follow us on –  Facebook / Twitter  / Google+

Facebook Comments

Sri Raghav

Admin