ಅಮಾಯಕ ಆಫ್ಘಾನ್‍ರ ಸಾವಿಗೆ ವಿಷಾಧ ವ್ಯಕ್ತಪಡಿಸಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಸೆ.18-ಆಫ್ಘಾನ್‍ನ ರಾಜಧಾನಿ ಕಾಬೂಲ್‍ನಲ್ಲಿ ಅಮೆರಿಕಾ ಸೇನೆ ನಡೆಸಿದ ದ್ರೋಣ್ ದಾಳಿಯಲ್ಲಿ ಏಳು ಮಕ್ಕಳು ಸೇರಿ 10 ಮಂದಿ ನಾಗರೀಕರು ಪ್ರಾಣ ಕಳೆದುಕೊಂಡಿರುವುದಕ್ಕೆ ಅಮೆರಿಕಾ ವಿಷಾದ ವ್ಯಕ್ತಪಡಿಸಿದೆ.

ಐಸಿಸ್ ಉಗ್ರರನ್ನು ಗುರಿಯಾಗಿರಿಸಿಕೊಂಡು ನಾವು ಡ್ರೋಣ್ ದಾಳಿ ನಡೆಸಿದ್ದೇವೂ ಆದರೆ, ನಮ್ಮ ದಾಳಿಗೆ 10 ಮಂದಿ ಅಮಾಯಕರು ಸಾವನ್ನಪ್ಪಿರುವುದಕ್ಕೆ ನಾವೆ ಹೊಣೆ ಎಂದು ಅಮೆರಿಕಾ ಸೇನಾಪಡೆಯ ಕಮಾಂಡರ್ ಫ್ರಾಂಕ್ ಮೆಕಾಂಜೆ ಒಪ್ಪಿಕೊಂಡಿದ್ದಾರೆ.

ಅಮೆರಿಕಾ ಸೇನಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಐಸಿಸ್-ಕೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದ ಹಿನ್ನಲೆಯಲ್ಲಿ ನಾವು ಡ್ರೋಣ್ ದಾಳಿ ನಡೆಸಬೇಕಾಯಿತು, ದುರದೃಷ್ಟವಶಾತ್ ನಮ್ಮ ದಾಳಿಗೆ ಅಮಾಯಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

Facebook Comments