ಅಮಿತ್ ಷಾ ಭೇಟಿ ಬೆನ್ನಲ್ಲೇ ಕೇರಳದಲ್ಲಿ ಬಿಜೆಪಿ-ಸಿಪಿಎಂ ಕಾರ್ಯಕರ್ತರ ಸಂಘರ್ಷ, ಬಾಂಬ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ತಿರುವನಂತಪುರಂ, ಅ.9-ಕೇರಳದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಕಣ್ಣೂರು ಜಿಲ್ಲೆಯಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತರು ನಡೆಸಿದರೆನ್ನಲಾದ ನಾಡ ಬಾಂಬ್ ದಾಳಿಯಲ್ಲಿ ಐವರು ಸಿಪಿಎಂ ಕಾರ್ಯಕರ್ತರು ಮತ್ತು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಕೇರಳದಲ್ಲಿ ರಾಜಕೀಯ ಕಗ್ಗೊಲೆಗಳು ನಡೆಯುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿನ್ನೆ ದೆಹಲಿಯಲ್ಲಿ ಪ್ರತಿಭಟನಾ ರ್ಯಾಲಿ ವೇಳೆ ಸಿಪಿಎಂ ವಿರುದ್ಧ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ಗಾಯಾಳುಗಳನ್ನು ತಲಸ್ಸೆರಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತ್ ಶಾ ಕೇರಳದಲ್ಲಿ ಕೈಗೊಂಡಿದ್ದ ಜನ ರಕ್ಷಕ್ ಯಾತ್ರೆ ಸಂದರ್ಭದಲ್ಲಿ ಬ್ಯಾನರ್ ನಿಲ್ಲಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಸಿಪಿಎಂ ಬೆಂಬಲಿಗರು ನಡೆಸಿದರೆನ್ನಲಾದ ಆಕ್ರಮಣಕ್ಕೆ ಪ್ರತೀಕಾರವಾಗಿ ಈ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

200ಕ್ಕೂ ಹೆಚ್ಚು ಎಡಪಂಥೀಯ ಕಾರ್ಯಕರ್ತರು ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದಾಗ ನಾಡ ಬಾಂಬ್ ಎಸೆಯಲಾಯಿತು. ಅದು ಸ್ಫೋಟಗೊಂಡು ಪೊಲೀಸರೂ ಸೇರಿದಂತೆ ಪ್ರತಿಭಟನಾಕಾರರು ಗಾಯಗೊಂಡರು. ಈ ಸಂದರ್ಭದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿ ಕಲ್ಲು ತೂರಾಟ ಮತ್ತು ಘರ್µಣೆ ನಡೆಯಿತು. ಪೊಲೀಸರ ಕ್ಷಿಪ್ರ ಮಧ್ಯಪ್ರವೇಶದಿಂದ ಸಂಭವಿಸಬಹುದಾದ ಅನಾಹುತ ತಪ್ಪಿತು.
ಆ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಗೊಂಡಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Facebook Comments

Sri Raghav

Admin