ಅಮಿತ್ ಷಾ ಮಂಗಳೂರಿಗೆ ಬಂದಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--1

ಬೆಂಗಳೂರು, ಅ.3-ಕೇರಳ ಮತ್ತು ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ಸದುದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಳೆದ ರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ. ತಡರಾತ್ರಿ ಅಹಮದಾಬಾದ್‍ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಷಾ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್‍ಕುಮಾರ್ ಕಟಿಲ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಮಂಗಳೂರಿನಿಂದ ನೇರವಾಗಿ ಅಮಿತ್ ಷಾ ಕೇರಳಕ್ಕೆ ತೆರಳಿದ್ದು, ಇಂದು ಮತ್ತು ನಾಳೆ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಕೇರಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು, ಕಗ್ಗೊಲೆ ಖಂಡಿಸಿ ಅಮಿತ್ ಷಾ ಇಂದು ಮತ್ತು ನಾಳೆ ಕಣ್ಣೂರು ಹಾಗೂ ಕಾಸರಗೋಡು, ಸಂತೆಶಿವಾರಹಳ್ಳಿಯಲ್ಲಿ ಪಾದಯಾತ್ರೆ ನಡೆಸಲಿದ್ದಾರೆ. ಕೇರಳ ಮುಖ್ಯಮಂತ್ರಿ ನಿನ್ನೆಯಷ್ಟೆ ಆರ್‍ಎಸ್‍ಎಸ್ ವಿರುದ್ಧ ಕೆಂಡ ಕಾರಿದ್ದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮುಗಲಭೆಗೆ ಸಂಘ ಪರಿವಾರವೇ ನೇರ ಕಾರಣ ಎಂದು ಆಪಾದಿಸಿದ್ದರು.  ಇದಕ್ಕೆ ತಿರುಗೇಟು ನೀಡಿದ್ದ ಆರ್‍ಎಸ್‍ಎಸ್ ರಾಜ್ಯದಲ್ಲಿ ನಡೆದಿರುವ ಕಗ್ಗೊಲೆ ಹಿಂದೆ ಸಿಪಿಎಂ ಕಾರ್ಯಕರ್ತರ ಕೈವಾಡವಿದೆ ಎಂದು ತಿರುಗೇಟು ನೀಡಿದ್ದರು. ಹೀಗೆ ರಾಜ್ಯದಲ್ಲಿ ನಿರಂತರವಾಗಿ ಆರ್‍ಎಸ್‍ಎಸ್ ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿರುವುದನ್ನು ಖಂಡಿಸಿ ಖುದ್ದು ಅಮಿತ್ ಷಾ ಅವರೇ ಪಾದಯಾತ್ರೆ ನಡೆಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದ್ದಾರೆ.
ಇನ್ನು ಕೇರಳ ಪ್ರವಾಸದ ನಂತರ ಮಂಗಳೂರಿಗೆ ಆಗಮಿಸಲಿರುವ ಷಾ ಪಕ್ಷ ಸಂಘಟನೆ, ಬಲವರ್ಧನೆ, ಸರ್ಕಾರದ ವಿರುದ್ಧ ಕೈಗೊಳ್ಳಬೇಕಾದ ರಣತಂತ್ರಗಳ ಬಗ್ಗೆ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ರಾಜ್ಯಕ್ಕೆ ಆಗಮಿಸಿದ ವೇಳೆ ಎರಡು ದಿನ ಷಾ ಪದಾಧಿಕಾರಿಗಳಿಗೆ ಕಿವಿ ಹಿಂಡಿದ್ದರು. ಇದೀಗ ವಿಸ್ತಾರಕ್ ಕಾರ್ಯಕ್ರಮ, ವರದಿ, ಸರ್ಕಾರದ ವಿರುದ್ಧ ಕೈಗೊಂಡಿರುವ ಪ್ರತಿಭಟನೆಗಳು, ಸಂಘಟನೆ, ಪರಿವರ್ತನಾ ರಥಯಾತ್ರೆ ಸೇರಿದಂತೆ ಮತ್ತಿತರ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಗುರುವಾರ ಪಕ್ಷದ ಪದಾಧಿಕಾರಿಗಳ ಜತೆ ದಿನಪೂರ್ತಿ ಷಾ ಬೈಠಕ್ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಸಹ ಉಸ್ತುವಾರಿ ಪಿಯುಷ್ ಗೋಯಲ್, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್‍ಕುಮಾರ್, ರಮೇಶ್ ಜಿಗಜಿಣಗಿ, ಅನಂತ್‍ಕುಮಾರ್ ಹೆಗಡೆ, ನಿರ್ಮಲ್‍ಕುಮಾರ್ ಸೀತಾರಾಮನ್ ಸೇರಿದಂತೆ ಪಕ್ಷದ ಎಲ್ಲ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಭವ್ಯ ಸ್ವಾಗತ :

ಮಂಗಳೂರು, ಅ.3-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿನ್ನೆ ತಡರಾತ್ರಿ ಮಂಗಳೂರಿಗೆ ಆಗಮಿಸಿದರು. ಕೇರಳದಲ್ಲಿ 15 ದಿನಗಳ ಜನ ರಕ್ಷಾ ಯಾತ್ರೆಗೆ ಅವರು ಚಾಲನೆ ನೀಡಲಿದ್ದು, ನಾಳೆ ಮಂಗಳೂರಿನಲ್ಲಿ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.  ಅಮಿತ್ ಷಾ ನಿನ್ನೆ ಸಂಜೆ 6 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ಅವರು ವಿಶೇಷ ವಿಮಾನದಲ್ಲಿ ಏಳು ಗಂಟೆಗಳ ತಡವಾಗಿ ಮುಂಜÁನೆ 1.20ರಲ್ಲಿ ಬಜ್ಪೆ ಏರ್‍ಪೋರ್ಟ್‍ಗೆ ಬಂದಿಳಿದರು. ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರಾದ ಕೃಷ್ಣ ಪಾಲೆಮಾರ್, ನಾಗರಾಜ ಶೆಟ್ಟಿ, ಶಾಸಕ ಎನ್.ಅಂಗಾರ ಸೇರಿದಂತೆ ಅನೇಕ ಮುಖಂಡರು ಷಾ ಅವರನ್ನು ಸ್ವಾಗತಿಸಿದರು. ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು.

Facebook Comments

Sri Raghav

Admin