ಅಮಿರ್ ಜೊತೆ ಶಾರುಖ್ ನಟಿಸುತ್ತಾರಾ ?

ಈ ಸುದ್ದಿಯನ್ನು ಶೇರ್ ಮಾಡಿ

Aamir-Khan--01

ಬಾಲಿವುಡ್ ಸೂಪರ್‍ಸ್ಟಾರ್‍ಗಳಾದ ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ನಟಿಸಲಿದ್ದಾರೆಯೇ? ಇಂಥ ಸುದ್ದಿಯೊಂದು ಬಿ-ಟೌನ್ ಅಂಗಳದಲ್ಲಿ ತೇಲಾಡುತ್ತದೆ. ಅಮಿರ್‍ನನ್ನು ಮಾ.14ರಂದು ಶಾರುಖ್ ಭೇಟಿಯಾಗಿ ಜನ್ಮದಿನದ ಶುಭಾಶಯ ಕೋರಿದ ನಂತರ ಈ ಸಮಕಾಲೀನ ನಟರು ಒಟ್ಟಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಇಂಥ ಗಾಳಿ ಸುದ್ದಿ ಕೇಳಿಬರುತ್ತದೆ.   ಆದರೆ, ಇಂಥ ಉಹಾಪೋಹಾಗಳನ್ನು ಎಸ್‍ಆರ್‍ಕೆ ತಳ್ಳಿ ಹಾಕಿದ್ದಾರೆ. ನಾವಿಬ್ಬರು ಸಿನಿಮಾದ ಬಗ್ಗೆಯಾಗಲಿ ಅಥವಾ ಹೊಸ ಪ್ರಾಜೆಕ್ಟ್ ಬಗ್ಗೆಯಾಗಲಿ ಚರ್ಚಿಸಿಲ್ಲ. ನಾವು ಈ ಹಿಂದೆ ಭೇಟಿಯಾದಾಗಲೂ ಇದರ ಬಗ್ಗೆ ಮಾತನಾಡಿಲ್ಲ. ಅಮೀರ್‍ಗೆ ಬರ್ತ್‍ಡೇ ಶುಭಾಶಯ ಹೇಳಲು ನಾನು ಆತನನ್ನು ಭೇಟಿಯಾಗಿದ್ದೆ.

ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಈ ಹಿಂದೆಯೂ ನಾನು ಅಮೀರ್‍ನನ್ನು ಭೇಟಿ ಮಾಡಿದ್ದೆ. ಆಗಲೂ ಹೊಸ ಪ್ರಾಜೆಕ್ಟ್ ಬಗ್ಗೆಯಾಗಲಿ ಅಥವಾ ಒಟ್ಟಿಗೆ ನಟಿಸುವ ಕುರಿತಾಗಲಿ ಮಾತನಾಡಲಿಲ್ಲ ಎಂದು ಕಿಂಗ್‍ಖಾನ್ ಸ್ಪಷ್ಟಪಡಿಸಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin