ಅಮೀರ್ ಖಾನ್ ಈಗ ಬಾಲಿವುಡ್ ಸುಲ್ತಾನ್

ಈ ಸುದ್ದಿಯನ್ನು ಶೇರ್ ಮಾಡಿ

amir

ಬಾಲಿವುಡ್ ಸೂಪರ್‍ಸ್ಟಾರ್ ಅಮೀರ್ ಖಾನ್ ಈಗ ಹಿಂದಿ ಚಿತ್ರರಂಗದ ಸುಲ್ತಾನ. ದಂಗಾಲ್ ಚಿತ್ರದಲ್ಲಿ ಈತನ ಮನೋಜ್ಞ ಅಭಿನಯ ಮತ್ತು ಸಿನಿಮಾದ ಸೂಪರ್‍ಡ್ಯೂಪರ್ ಹಿಟ್‍ನಿಂದಾಗಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಭಾರತ ಚಿತ್ರರಂಗದ ಹೊಸ ಸುಲ್ತಾನನಾಗಿ ಹೊರಹೊಮ್ಮಿದ್ದಾನೆ ಎಂದು ಬಾಲಿವುಡ್ ವಿಮರ್ಶಕರು ಸಂಪೂರ್ಣ ಅಂಕ ನೀಡಿದ್ದಾರೆ. ಅಮೀರ್‍ನ ಯಶಸ್ಸಿನ ಗ್ರಾಫ್ ಏರುತ್ತಿರುತ್ತಿದ್ದು, ಈತ ನಟಿಸಿದ ನಿರ್ದೇಶಿಸಿದ ಬಹುತೇಕ ಎಲ್ಲ ಸಿನಿಮಾಗಳೂ ಬಾಕ್ಸ್ ಆಫೀಸ್‍ನಲ್ಲಿ ಗೆದ್ದಿವೆ. ದಂಗಲ್ ಕೇವಲ 10 ದಿನಗಳಲ್ಲಿ 300 ಕೋಟಿ ರೂ.ಗಳಿಗೂ ಹೆಚ್ಚು ಲಾಭ ಗಳಿಸಿ ಮುನ್ನುಗ್ಗುತ್ತಿದೆ. ದಂಗಲ್‍ನಲ್ಲಿ ಕುಸ್ತಿ ತರಬೇತುದಾರ ಮಹಾವೀರ್ ಸಿಂಗ್ ಫ್ರೋಟ್ ಪಾತ್ರದಲ್ಲಿ ಅಮೀರ್ ಮಿಂಚಿದ್ದಾನೆ.

ದಂಗಲ್ ಭಾರತದ ಮಹೋನ್ನತ ಕ್ರೀಡಾ ಸಿನಿಮಾ ಆಗಿ ವಿಶ್ವವಿಖ್ಯಾತಿಗೂ ಪಾತ್ರವಾಗಿದೆ. ಖಾನ್‍ತ್ರಯರಲ್ಲಿ ಬಾಲಿವುಡ್ ಬಾದ್‍ಷಾ ಶಾರುಖ್ ಖಾನ್ ಮತು ಮತ್ತೊಬ್ಬ ಸೂಪರ್‍ಸ್ಟಾರ್ ಸಲ್ಮಾನ್ ಖಾನ್‍ಗಿಂತಲೂ ಅಮೀರ್ ಈಗ ಜನಪ್ರಿಯತೆಯ ಉತ್ತುಂಗದಲ್ಲಿದ್ದಾನೆ. ಎಸ್‍ಆರ್‍ಕೆ ನಟನೆಯ ರಾಯೀಸ್ ಬಿಡುಗಡೆಗೆ ಮುನ್ನವೇ  ಬಾಲಿವುಡ್‍ನಲ್ಲಿ ಎ.ಕೆ. ಅಗ್ರಸ್ಥಾನ ಗಳಿಸಿದ್ದಾನೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin