ಅಮೆರಿಕಕ್ಕೀಗ ರಷ್ಯಾ ಹ್ಯಾಕರ್‍ಗಳ ಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

Rassia-Hackers

ವಾಷಿಂಗ್ಟನ್, ಜ.1-ಅಮೆರಿಕ ಮೇಲೆ ರಷ್ಯಾ ಹ್ಯಾಕರ್‍ಗಳ ಸೈಬರ್ ದಾಳಿ ಮುಂದುವರಿದಿಗೆ. ವೆರ್‍ಮೆಂಟ್ ಪ್ರಾಂತ್ಯದ ಸಾರ್ವಜನಿಕ ವ್ಯವಸ್ಥೆಯಲ್ಲಿ ರಷ್ಯಾ ಹ್ಯಾಕರ್‍ಗಳು ನಡೆಸಿದ ಸೈಬರ್ ದಾಳಿ ಯತ್ನ ಕೃತ್ಯಗಳಿಗೆ ಸಂಬಂಧಿಸಿದ ರಹಸ್ಯ ಸಂಕೇತ ಪತ್ತೆಯಾಗುವ ಮೂಲಕ ಅಮೆರಿಕದ ವಿದ್ಯುತ್ ಜಾಲ ಸುರಕ್ಷತಾ ವ್ಯವಸ್ಥೆಯ ವೈಫಲ್ಯ ಬೆಳಕಿಗೆ ಬಂದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೈಬರ್ ದಾಳಿ ನಡೆಸಲಾಗಿದೆ ಎಂಬ ಕಾರಣಕ್ಕಾಗಿ ರಷ್ಯಾದ ಮೇಲೆ ವಾಷಿಂಗ್ಟನ್ ದಿಗ್ಬಂಧನ ವಿಧಿಸಿ, ಆ ದೇಶದ 35 ಉನ್ನತಾಧಿಕಾರಿಗಳನ್ನು ಉಚ್ಚಾಟಿಸಿದ ಬೆನ್ನಲ್ಲೇ ರಷ್ಯಾ ಹ್ಯಾಕರ್‍ಗಳ ಈ ಕೃತ್ಯ ಬಹಿರಂಗಗೊಂಡಿದೆ.

ಇದೊಂದು ಅತ್ಯಂತ ಕೊಳಕು ಯತ್ನ ಎಂದು ಪ್ರತಿಕ್ರಿಯಿಸಿರುವ ಅಮೆರಿಕ ಅಧಿಕಾರಿಗಳು, ಸಾರ್ವಜನಿಕ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಇದರಿಂದ ಯಾವುದೇ ಅಡ್ಡಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.  ಅಮೆರಿಕ ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿದ ಬಳಿಕ ಕಂಪ್ಯೂಟರ್ ಜಾಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಂದು ಲ್ಯಾಪ್‍ಟಾಪ್‍ಗೆ ಮಾಹಿತಿಯನ್ನು ಹ್ಯಾಕ್ (ಕದಿಯುವ) ಮಾಡಬಲ್ಲ ಅತ್ಯಂತ ಸೂಕ್ಷ್ಮ ವ್ಯವಸ್ಥೆ ಅಳವಡಿಸಿದ್ದು ಪತ್ತೆಯಾಯಿತು. ಆದಾಗ್ಯೂ, ಲ್ಯಾಪ್‍ಟಾಪ್ ವಿದ್ಯುತ್ ಜಾಲದೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಬಳಿಕ ಲ್ಯಾಪ್‍ಟಾಪ್‍ನನ್ನು ಬೇರ್ಪಡಿಸಲಾಯಿತು ಎಂದು ಬರ್ಲಿಂಗ್‍ಟನ್ ವಿದ್ಯುತ್ ಇಲಾಖೆ ತಿಳಿಸಿದೆ.

ರಷ್ಯಾ ಹ್ಯಾಕರ್‍ಗಳು ಅಮೆರಿಕದ ಪ್ರಮುಖ ವಿದ್ಯುತ್ ಜಾಲವನ್ನು ಏಕೆ ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಾರ್ವಜನಿಕ ವ್ಯವಸ್ಥೆಯನ್ನು ಹಾಳು ಮಾಡುವ ಅಥವಾ ವಿದ್ಯುತ್ ಜಾಲದ ಒಂದು ಭಾಗವನ್ನು ಭೇದಿಸುವ ಯತ್ನ ಇದಾಗಿರಬಹುದು ಎಂದು ಶಂಕಿಸಲಾಗಿದೆ.  ಉಕ್ರೇನ್ ಪಶ್ಚಿಮ ಭಾಗದಲ್ಲಿ 2015ರ ಡಿಸೆಂಬರ್‍ನಲ್ಲಿ ವಿದ್ಯುತ್ ವೈಫಲ್ಯದಿಂದ ಆ ಪ್ರಾಂತ್ಯದ ಅರ್ಧ ಭಾಗ ಕಗ್ಗತ್ತಲಲ್ಲಿ ಮುಳುಗಿತ್ತು. ಇದಕ್ಕೆ ರಷ್ಯಾ ಹ್ಯಾಕರ್‍ಗಳ ಸೈಬರ್ ದಾಳಿಯೇ ಕಾರಣ ಎಂಬುದು ಪತ್ತೆಯಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin