ಅಮೆರಿಕಕ್ಕೆ ತೆರಳಲು ಭಾರತೀಯ ವಿದ್ಯಾರ್ಥಿಗಳ ಹಿಂದೇಟು

ಈ ಸುದ್ದಿಯನ್ನು ಶೇರ್ ಮಾಡಿ

America--021

ನವದೆಹಲಿ,ಫೆ.26- ಒಂದು ಕಾಲಕ್ಕೆ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಲು ತುದಿಗಾಲಲ್ಲಿ ನಿಲ್ಲುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಈಗ ಅಲ್ಲಿಗೆ ಹೋಗುವುದೇ ಬೇಡವೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದು , ಅಮೆರಿಕ ಪ್ರವಾಸವನ್ನೇ ಕೈ ಬಿಡುವ ಹಂತ ತಲುಪಿದ್ದಾರೆ.   ಆದರೆ ಇತ್ತೀಚೆಗೆ ಅಮೆರಿಕದ ಕಾನ್ಸಾಸ್‍ನಲ್ಲಿ ನಡೆದ ಜನಾಂಗೀಯ ವಿದ್ವೇಷದ ಹತ್ಯೆಯ ಹಿನ್ನೆಲೆಯಲ್ಲಿ ಈಗ ಭಾರತೀಯ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದರೆ ಪೋಷಕರು ಕೂಡ ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.   ಅಮೆರಿಕ ಮಾಜಿ ಸೈನಿಕ ಆ್ಯಡಂ ಪ್ಯೂರಿಂಟನ್ ಎಂಬ ವ್ಯಕ್ತಿ ಬುಧವಾರ ರಾತ್ರಿ ಅಲ್ಲಿನ ಬಾರ್‍ವೊಂದರಲ್ಲಿ ಹೈದರಾಬಾದ್‍ನ ಟೆಕ್ಕಿ ಶ್ರೀನಿವಾಸ ಕೂಚಿಬೋಟ್ಲ ಎಂಬ ಭಾರತೀಯನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೆ `ನನ್ನ ದೇಶ ಬಿಟ್ಟು ತೊಲಗಿ’ ಎಂದು ಅಬ್ಬರಿಸಿದ್ದು ಭಾರತೀಯ ವಿದ್ಯಾರ್ಥಿಗಳನ್ನು ಈ ಆತಂಕಕ್ಕೆ ತಳ್ಳಿದೆ.

ಅನೇಕ ವಿದ್ಯಾರ್ಥಿಗಳು ಪಾಸ್‍ಪೋರ್ಟ್, ವೀಸಾ ಸಿದ್ದಪಡಿಸಿಕೊಂಡು ಅಮೆರಿಕಕ್ಕೆ ಹೊರಟು ನಿಂತವರು ಈಗ ತಮ್ಮ ಮನಸು ಬದಲಾಯಿಸಿ ಪ್ರಯಾಣವನ್ನು ಮುಂದೂಡಿದ್ದಾರೆ.
ಈಗ ಅಮೆರಿಕಕ್ಕೆ ಹೋಗುವುದೇ ಬೇಡವೇ ಎಂಬ ಸಂದಿಗ್ಧದಲ್ಲಿ ಸಿಲುಕಿ ಉನ್ನತ ವ್ಯಾಸಂಗಕ್ಕೆ ಹೊರಟಿದ್ದ ವಿದ್ಯಾರ್ಥಿಗಳು ಹೈರಾಣಾಗಿದ್ದರೆ, ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸುವುದೇ ಅಥವಾ ಬಿಡುವುದೇ ಎಂದು ತಂದೆ-ತಾಯಿಂದಿರು ಚಿಂತೆಗೊಳಗಾಗಿದ್ದಾರೆ.   ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾದ ನಂತರದ ದಿನಗಳಲ್ಲಿ ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರು ಜಾರಿಗೆ ತರುತ್ತಿರುವ ಹೊಸ ಹೊಸ ನೀತಿಗಳಿಂದಾಗಿ ಭಾರತವೂ ಸೇರಿದಂತೆ ಅನೇಕ ವಿದೇಶಿ ಪ್ರಜೆಗಳು ಅಮೆರಿಕ ತೊರೆಯಲು ಸಿದ್ದರಾಗುತ್ತಿದ್ದಾರೆ.

ಬುಧವಾರ ರಾತ್ರಿ ನಡೆದ ಹತ್ಯಾಕಾಂಡಕ್ಕೂ ಟ್ರಂಪ್ ಅವರ ನೀತಿಗೂ ಯಾವುದೇ ಸಂಬಂಧವಿಲ್ಲ ಎಂದು ಶ್ವೇತಭವನ ಹೇಳುತ್ತಿದ್ದರೂ ಕೂಡ ಜನ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳಂತೂ ಅಮೆರಿಕ ಸಹವಾಸವೇ ಬೇಡ ಎಂಬ ಮನಸ್ಥಿತಿಗೆ ತಲುಪಿರುವುದಂತೂ ಸತ್ಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin