ಅಮೆರಿಕದಲ್ಲಿರುವ ಭಾರತೀಯರ ಮಕ್ಕಳನ್ನು ಕಾಡುತ್ತಿರುವ ‘ಟ್ರಂಪ್ ಭೂತ’

ಈ ಸುದ್ದಿಯನ್ನು ಶೇರ್ ಮಾಡಿ

Trump-America

ವಾಷಿಂಗ್ಟನ್, ಜ.18-ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇನ್ನು ನಾವು ದೇಶ ಬಿಟ್ಟು ಹೋಗಬೇಕೇ?-ಇದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಮಕ್ಕಳು ತಮ್ಮ ಪೋಷಕರನ್ನು ಕೇಳುತ್ತಿರುವ ಆತಂಕದ ಪ್ರಶ್ನೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ ಸಂಸದರಿಗೆ ಸ್ವತಃ ಈ ಅನುಭವವಾಗಿದೆ. ಟ್ರಂಪ್ ಗೆದ್ದಿರುವುದು ನಾವು ದೇಶ ತ್ಯಜಿಸಬೇಕೆಂಬ ಅರ್ಥವೆ ಎಂದು ಮಕ್ಕಳು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಲು ಪೋಷಕರು ತಬ್ಬಿಬ್ಬಾಗಿದ್ದಾರೆ.

ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಗೆಲುವು ಸಾಧಿಸಿದ ನಂತರ ಹಾಗೂ ವೀಸಾ ಕುರಿತು ಹೊಸ ಕಠಿಣ ಕಾನೂನು ಜಾರಿಗೊಳಿಸಲು ನೂತನ ಸರ್ಕಾರ ಸಿದ್ದತೆ ನಡೆಸಿರುವುದರಿಂದ ಭಾರತೀಯರೂ ಸೇರಿದಂತೆ ದೇಶದಲ್ಲಿ ನೆಲೆಸಿರುವ ವಿವಿಧ ದೇಶಗಳ ಪ್ರಜೆಗಳು ಸಾಕಷ್ಟು ಆತಂಕ-ಉದ್ವೇಗಗಳು ಮನೆಮಾಡಿದೆ. ವಲಸಿಗರು, ಅಲ್ಪಸಂಖ್ಯಾತರು, ಕಡಿಮೆ ಆದಾಯದ ಉದ್ಯೋಗಿಗಳು, ಅನ್ಯ ಧರ್ಮೀಯರು ವಿಶೇಷವಾಗಿ ಈ ಆತಂಕಕ್ಕೆ ಒಳಗಾಗಿದ್ದಾರೆ ಎಂದು ದಕ್ಷಿಣ ಮತ್ತು ಕೇಂದ್ರ ಪ್ರಾಂತ್ಯಗಳ ಸಹಾಯಕ ಕಾರ್ಯದರ್ಶಿ ಆಸಿಯಾ ನಿಶಾ ದೇಸಾಯಿ ಬಿಸ್ವಾಲ್ ಹೇಳಿದ್ದಾರೆ.

ಚುನಾವಣೆ ಮುಗಿದ ಮರುದಿನದಿಂದಲೇ ನನ್ನ ಮನೆಯಲ್ಲೇ ಈ ಆತಂಕದ ಅನುಭವವಾಗಿದೆ. ಏಳು ಮತ್ತು ಒಂಭತ್ತು ವರ್ಷದ ನನ್ನಿಬ್ಬರು ಮಕ್ಕಳು ನನಗೆ ಈ ಬಗ್ಗೆ ಪ್ರಶ್ನೆ ಕೇಳಿದಾಗ ನನಗೆ ಆಘಾತವಾಯಿತು. ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದರೆ, ಅಧ್ಯಕ್ಷರಾದರೆ ನಾವು ದೇಶ ಬಿಟ್ಟು ಹೋಗಬೇಕೆ ಎಂದು ನನ್ನ ಮಕ್ಕಳು ನನ್ನನ್ನು ಪ್ರಶ್ನಿಸಿದರು. ಈ ಪ್ರಶ್ನೆಗಳಿಗೆ ನನ್ನಲ್ಲಿ ಸಮರ್ಪಕ ಉತ್ತರ ಇರಲಿಲ್ಲ ಎಂದು ಬಿಸ್ವಾಲ್ ತಿಳಿಸಿದ್ದಾರೆ.  ಇದು ಕೇವಲ ನನ್ನ ಮನೆಯಲ್ಲಿ ಆಗುತ್ತಿರುವ ಅನುಭವವಲ್ಲ. ಇಲ್ಲಿ ನೆಲೆಸಿರುವ ಸೂಕ್ಸ್ಮ ಸಮುದಾಯಗಳ ಕುಟುಂಬಗಳಲ್ಲೂ ಇದೇ ರೀತಿಯ ಆತಂಕ ಮತ್ತು ಭವಿಷ್ಯದ ಗೊಂಡಲ ಕಾಡುತ್ತಿದೆ ಎಂದು ಅವರು ಹೇಳಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin