ಅಮೆರಿಕದಲ್ಲಿ ಕಿಂಗ್ ಖಾನ್ ಗೆ ಮತ್ತೆ ಅವಮಾನ

ಈ ಸುದ್ದಿಯನ್ನು ಶೇರ್ ಮಾಡಿ

sharukh-khan

ಲಾಸ್‍ಏಂಜೆಲಿಸ್,ಆ.12– ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು  ಅಮೆರಿಕದ ವಲಸೆ ಇಲಾಖೆ ಇಲ್ಲಿನ ಏರ್‍ಪೆÇೀರ್ಟ್‍ನಲ್ಲಿ ವಶಕ್ಕೆ ತೆಗೆದುಕೊಂಡು ಕೆಲಕಾಲ ವಿಚಾರಣೆ ನಡೆಸಿತು.   ಈ ಕುರಿತು ಟ್ವೀಟ್ ಮಾಡಿರುವ ಹಿಂದಿ ಚಿತ್ರರಂಗದ ಬಾದ್‍ಶಾ ಭದ್ರತಾ ವ್ಯವಸ್ಥೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ ಮತ್ತು ಗೌರವಿಸುತ್ತೇನೆ. ಆದರೆ ಪ್ರತಿ ಬಾರಿ ನನ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಅಮೆರಿಕದ ಇಮಿಗ್ರೇಷನ್ ಅಧಿಕಾರಿಗಳ ವರ್ತನೆಯಿಂದ ನಾನು ಬೇಸತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ಲಾಸ್ ಏಂಜೆಲಿಸ್ ವಿಮಾನ ನಿಲ್ದಾಣದಲ್ಲಿ ಎಸ್‍ಆರ್‍ಕೆಯನ್ನು ಏಕೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂಬ ಬಗ್ಗೆ ವಿದೇಶಾಂಗ ಇಲಾಖೆ ತಕ್ಷಣಕ್ಕೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

ಹಾಗೆ ನೋಡಿದರೆ, ಖಾನ್‍ರನ್ನು  ಅಮೆರಿಕದ ಏರ್‍ಪೋರ್ಟ್‍ನಲ್ಲಿ ವಶಕ್ಕೆ ತೆಗೆದುಕೊಂಡಿರುವುದು ಇದು ಮೊದಲಲ್ಲ. 2012ರಲ್ಲಿ ವಲಸೆ ಅಧಿಕಾರಿಗಳು ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆ ಕಾಲ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿತ್ತು. ಆನಂತರ  ಅಮೆರಿಕದ ಸೀಮಾಸುಂಕ ಮತ್ತು ಗಡಿಭದ್ರತಾ ಅಧಿಕಾರಿಗಳು ಶಾರುಕ್‍ರನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ಕ್ಷಮೆ ಕೇಳಿತ್ತು.  ಇದೇ ರೀತಿ ಭಾರತದ ಸೂಪರ್ ಸ್ಟಾರ್‍ನನ್ನು 2009ರಲ್ಲೂ ಸಹ ನ್ಯೂಜೆರ್ಸಿಯ ನ್ಯೂ ಆರ್ಕ್ ಲಿಬರ್ಟಿ ಇಂಟರ್ ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ಅಮೆರಿಕ ವಲಸೆ ಅಧಿಕಾರಿಗಳ ವಶಕ್ಕೆ ತೆಗೆದುಕೊಂಡಿದ್ದರು. ಕಂಪ್ಯೂಟರ್ ಅಲಟ್ರ್ಸ್ ಲಿಸ್ಟ್‍ನಲ್ಲಿ ಇವರ ಹೆಸರು ಪ್ರಕಟಗೊಂಡ ನಂತರ ವಶಕ್ಕೆ ಪಡೆಯಲಾಗಿತ್ತು.

Shah Rukh Khan ‘detained’ at US airport

► Follow us on –  Facebook / Twitter  / Google+

Facebook Comments

Sri Raghav

Admin