ಅಮೆರಿಕದಲ್ಲಿ ಗನ್‍ಮ್ಯಾನ್ ಅಟ್ಟಹಾಸಕ್ಕೆ ಮತ್ತೊಬ್ಬ ಭಾರತೀಯ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Firing--1

ವಾಷಿಂಗ್ಟನ್, ಫೆ.9-ಅಮೆರಿಕದಲ್ಲಿ ಭಾರತೀಯ ಮೂಲದವರ ಹತ್ಯೆ ಪ್ರಕರಣಗಳು ಮುಂದುವರಿದಿರುವಾಗಲೇ ಮತ್ತೊಂದು ಕೃತ್ಯ ಮರುಕಳಿಸಿದೆ. ಜಾರ್ಜಿಯಾದ ಮಳಿಗೆಯೊಂದಕ್ಕೆ ನುಗ್ಗಿದ ಬಂದೂಕುದಾರಿ ದರೋಡೆಕೋರನೊಬ್ಬ ಮನಬಂದಂತೆ ಗುಂಡು ಹಾರಿಸಿ ಭಾರತೀಯನನ್ನು ಕೊಂದು, ಮತ್ತೊಬ್ಬನನ್ನು ಗಾಯಗೊಳಿಸಿದ್ದಾನೆ.  ಜಾರ್ಜಿಯಾ ಬರ್ನೆಟ್ ಫೆರ್ರಿ ರಸ್ತೆಯಲ್ಲಿರುವ ಹೈ-ಟೆಕ್ ಕ್ವಿಕ್ ಸ್ಟಾಪ್‍ನಲ್ಲಿ ಮಂಗಳವಾರ ರಾತ್ರಿ ಈ ನಡೆದ ಗುಂಡಿನ ದಾಳಿಯಲ್ಲಿ ಪರಂಜೀತ್ ಸಿಂಗ್ (44) ಹತರಾದರು ಎಂದು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಮಕ್ಕಳ ತಂದೆಯಾದ ಸಿಂಗ್ ಅವರನ್ನು ಕೊಂದ 10 ನಿಮಿಷಗಳ ಬಳಿಕ ಹತ್ತಿರದಲ್ಲೇ ಇರುವ ಎಲ್ಮ್ ಸ್ಟ್ರೀಟ್ ಫುಡ್ ಅಂಡ್ ಬೆವರೇಜ್ ಅಂಗಡಿಗೆ ನುಗ್ಗಿದ ಗನ್‍ಮ್ಯಾನ್ 30 ವರ್ಷದ ಗುಮಾಸ್ತ ಪಾರ್ಥಿ ಪಟೇಲ್‍ರ ಮೇಲೆ ಗುಂಡು ಹಾರಿಸಿ ಮಳಿಗೆಯಲ್ಲಿದ್ದ ಹಣ ದೋಚಿ ಪರಾರಿಯಾದ. ತೀವ್ರ ಗಾಯಗೊಂಡಿರುವ ಪಟೇಲ್ ಸ್ಥಿತಿ ಚಿಂತಾಜನಕವಾಗಿದೆ.   ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಹಂತಕ ಲಮರ್ ರಶಾದ್ ನಿಕೋಲ್ಸನ್(28) ಎಂಬಾತನನ್ನು ಕೊಲೆ, ದರೋಡೆ, ಅಕ್ರಮ ಶಸ್ತ್ರಾಸ್ತ್ರಗಳ ಬಳಕೆ ಮೊದಲಾದ ಆರೋಪಗಳ ಮೇಲೆ ಬಂಧಿಸಲಾಗಿದೆ.

Facebook Comments

Sri Raghav

Admin