ಅಮೆರಿಕದಲ್ಲಿ ಗುಂಡಿಕ್ಕಿ ಮಂಗಳೂರು ಮೂಲದ ದಂಪತಿ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Mangalore-Couple-Murder

ವಾಷಿಂಗ್ಟನ್, ಮೇ 6-ಭಾರತೀಯ ಮೂಲದ ದಂಪತಿ ಮೇಲೆ ಅವರ ಪುತ್ರಿಯ ಮಾಜಿ ಗೆಳೆಯ ಗುಂಡು ಹಾರಿಸಿ ಕೊಂದಿರುವ ಘಟನೆ ಅಮೆರಿಕದ ಸ್ಯಾನ್‍ಜೋಸ್‍ನಲ್ಲಿ ನಡೆದಿದೆ. ಈ ಕೃತ್ಯದ ನಂತರ ಹಂತಕ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ.   ಸಿಲಿಕಾನ್ ವ್ಯಾಲಿಯ ತಂತ್ರಜ್ಞಾನ ಅಧಿಕಾರಿ ಮಂಗಳೂರು ಮೂಲದ ನರೇನ್ ಪ್ರಭು ಹಾಗೂ ಅವರ ಪತ್ನಿಯನ್ನು ಸ್ಯಾನ್ ಜೋಸ್‍ನ ಅವರ ಮನೆಯಲ್ಲಿ ಮಿಜರ್ ಟ್ಯಾಟ್‍ಲಿಕ್ (24) ಎಂಬ ಯುವಕ ನಿನ್ನೆ ರಾತ್ರಿ ಗುಂಡಿಟ್ಟು ಕೊಂದಿದ್ದಾನೆ ಎಂದು ಸಿಬಿಎಸ್ ಸ್ಯಾನ್ ಫ್ರಾನ್ಸಿಸ್ಕೋ ವರದಿ ಮಾಡಿದೆ. ಈ ಕೃತ್ಯ ನಡೆದಾಗ ಪ್ರಭು ಅವರ ಪುತ್ರಿ ಇರಲಿಲ್ಲ. ಅಕೆ ಇನ್ನೊಂದು ರಾಜ್ಯದಲ್ಲಿ ನೆಲೆಸಿದ್ದಾರೆ.ಹತ್ಯೆಗೀಡಾದ ದಂಪತಿಯ ವಯಸ್ಕ ಪುತ್ರಿಯೊಂದಿಗೆ ಆರೋಪಿಯು ಸಂಬಂಧ ಹೊಂದಿದ್ದನು. ಸೇಡಿಗಾಗಿ ಈ ಹತ್ಯೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಸ್ಯಾನ್‍ಜೋಸ್ ಪೊಲೀಸ್ ಮುಖ್ಯಸ್ಥ ಎಡ್ಡಿ ಗಾರ್ಸಿಯಾ ತಿಳಿಸಿದ್ದಾರೆ.   ಇವರಿಬ್ಬರ ಸಂಬಂಧ ಕಳೆದ ವರ್ಷ ಮುರಿದು ಬಿದ್ದಿತ್ತು. ಹಂತಕನು ಅಪರಾಧ ಹಿನ್ನೆಲೆ ಇರುವವನಾಗಿದ್ದು, ಕೆಲವು ಕ್ರಿಮಿನಲ್ ಕೃತ್ಯಗಳಲ್ಲಿ ಶಾಮೀಲಾಗಿದ್ದಾನೆ ಎಂದು ಅವರು ಹೇಳಿದ್ದಾರೆ. ಮನೆಯಲ್ಲಿ ದಂಪತಿಯನ್ನು ಹತ್ಯೆ ಮಾಡಿದ ಆತ ಅವರ 13 ವರ್ಷ ಮಗನನ್ನು ಒತ್ತೆಯಲ್ಲಿಟ್ಟುಕೊಂಡಿದ್ದ. ಹಂತಕನನ್ನು ಶರಣಾಗುವಂತೆ ಸ್ವಾಟ್ ಪೊಲೀಸ್ ತಂಡ ಎಚ್ಚರಿಕೆ ನೀಡಿತು. ನಂತರ ಹಂತಕ ಮಿಜರ್ನನ್ನು ಗುಂಡಿಟ್ಟು ಕೊಂದು ಬಾಲಕನನ್ನು ಪೊಲೀಸರು ರಕ್ಷಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin