ಅಮೆರಿಕದಲ್ಲಿ  ಜಯಲಲಿತಾ ಸ್ಮರಣೆ

ಈ ಸುದ್ದಿಯನ್ನು ಶೇರ್ ಮಾಡಿ

Jayalalitha-0001

ವಾಷಿಂಗ್ಟನ್, ಜ.10-ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಗೌರವಾರ್ಥ ಅಮೆರಿಕ ಸಂಸದರು ಮತ್ತು ಭಾರತೀಯ ಮೂಲದ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಲ್ಲಿನ ಕ್ಯಾಪಿಟಲ್ ಹಿಲ್‍ನಲ್ಲಿ ನಡೆದ ಮೆಮೋರಿಯಲ್ ಸರ್ವಿಸ್‍ನಲ್ಲಿ ಜಯಾರನ್ನು ಸ್ಮರಿಸಿದ ಗಣ್ಯರು, ಸಮೂಹ ನಾಯಕಿಯಾಗಿದ್ದ ಅವರು ಜಗತ್ತಿನಾದ್ಯಂತ ಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಬಣ್ಣಿಸಿದರು.  ಜಯಲಲಿತಾ ಅವರು ಸಮರ್ಥ ನಾಯಕಿಯಾಗಿದ್ದರು.

ತಮ್ಮ ಅನ್ವೇಷಣಾತ್ಮಿಕ ಕಾರ್ಯಕ್ರಮಗಳು ಮತ್ತು ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ವಿಶ್ವದ ಜನರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡ್ಯಾನಿ ಕೆ. ಡೇವಿಸ್ ಹೇಳಿದರು.   ಭಾರತೀಯ ಮೂಲದ ಅಮೆರಿಕ ಸಂಸದರಾದ  ರಾಜಾ  ಕೃಷ್ಣಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin