ಅಮೆರಿಕದಲ್ಲಿ ಭಾರತೀಯ ಮೂಲದ ಸಿಖ್ ವೈದ್ಯನಿಗೆ ಕೊಲೆ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Sikha-America

ವಾಷಿಂಗ್ಟನ್, ಮಾ.31- ಭಾರತೀಯ ಮೂಲದ ಅಮೆರಿಕನ್ನರನ್ನು ಗುರಿಯಾಗಿಟ್ಟಕೊಂಡು ಜನಾಂಗೀಯ ದ್ವೇಷಾಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೇ, ಇಂಡಿಯಾನಾದಲ್ಲಿ ಅನಾಮದೇಯನೊಬ್ಬ ಭಾರತೀಯ ಮೂಲದ ಸಿಖ್ ವೈದ್ಯರೊಬ್ಬರನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದಾನೆ. ಇಂಡಿಯಾನದ ಮನ್ರೋ ಹಾಸ್ಪಿಟಲ್‍ನಲ್ಲಿ ವೈದ್ಯರಾಗಿರುವ ಅಮನ್‍ದೀಪ್ ಸಿಂಗ್ ಅವರಿಗೆ ಮೊಬೈಲ್ ಮೂಲಕ ಎಸ್‍ಎಂಎಸ್ ಸಂದೇಶ ರವಾನಿಸಿರುವ ವ್ಯಕ್ತಿಯೊಬ್ಬ ಕೊಲ್ಲುವುದಾಗಿ ಧಮ್ಕಿ ಹಾಕಿದ್ದಾನೆ. ಅಲ್ಲದೇ ತಾನು ಈ ಹಿಂದೆ ಸಮುದಾಯ ನಾಯಕರು, ವೃತ್ತಿಪರರೂ ಸೇರಿದಂತೆ ಅನೇಕರನ್ನು ಹತ್ಯೆ ಮಾಡಿರುವುದಾಗಿಯೂ ಹೇಳಿಕೊಂಡಿದ್ದು, ಮುಂದಿನ ಬಲಿ ನೀವೇ ಎಂದೂ ಎಚ್ಚರಿಕೆ ನೀಡಿದ್ದಾನೆ.

ಇಂಡಿಯಾನ ಪೊಲಿಸ್ ಮೂಲಕ ಸಿಖ್ಸ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಎಸ್‍ಪಿಎಸಿ) ಈ ಸಂಬಂಧ ಖಂಡನಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ತನಿಖೆ ಕೈಗೊಂಡ ಬ್ಲೂಮಿಂಗ್ಟನ್ ಪೊಲೀಸರು ತನಿಖೆ ನಡೆಸಿದಾಗ ಮೂರನೇ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿ ಅನ್ಯರ ಮೊಬೈಲ್‍ನಿಂದ ಈ ಸಂದೇಶ ರವಾನಿಸಿರುವುದು ದೃಢಪಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin