ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Indian--02

ಚಿಕಾಗೋ, ಡಿ.11-ಅಮೆರಿಕದಲ್ಲಿರುವ ಭಾರತೀಯರ ಹತ್ಯೆ ಮತ್ತು ಹತ್ಯೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೇ, ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಚಿಕಾಗೋದ ಅಲ್‍ಬನಿ ಪಾರ್ಕ್‍ನಲ್ಲಿ ನಿನ್ನೆ ನಡೆದಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿರುವ ಮಹಮದ್ ಅಕ್ಬರ್(30) ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ಆರೈಕೆಗಾಗಿ ತಕ್ಷಣ ಅಮೆರಿಕಾಗೆ ತೆರಳಲು ನೆರವಾಗಬೇಕೆಂದು ಹೈದರಾಬಾದ್ ಉಪ್ಪಲ್‍ನಲ್ಲಿರುವ ಆತನ ಪೋಷಕರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.

ಮಹಮದಕ್ ಅಕ್ಬರ್ ಇಲಿನೊಯ್ಸ್‍ನಲ್ಲಿರುವ ಡಿವೆರಿ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸಿಸ್ಟಮ್ಸ್ ನೆಟ್‍ವರ್ಕಿಂಗ್ ಅಂಡ್ ಟೆಲಿಕಮ್ಯೂನಿಕೇಷನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ಧಾರೆ. ನಿನ್ನೆ ಬೆಳಗ್ಗೆ 8.45ರಲ್ಲಿ ಚಿಕಾಗೋದ ಅಲಬನಿ ಪಾರ್ಕ್ ಬಳಿ ನಿಲುಗಡೆ ಮಾಡಿದ್ದ ಕಾರಿನ ಬಳಿ ಅವರು ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಪರಾರಿಯಾದ. ಕೆನ್ನೆಯ ಭಾಗಕ್ಕೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅಮೆರಿಕದ ಕನ್ಸಾಸ್‍ನಲ್ಲಿ ನಡೆದ ವರ್ಣದ್ವೇಷದ ದಾಳಿಯೊಂದರಲ್ಲಿ ಹೈದರಾಬಾದ್ ಎಂಜಿನಿಯರ್ ಶ್ರೀನಿವಾಸ ಕುಚಿಬೋಟ್ಲಾ ಹತರಾಗಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin