ಅಮೆರಿಕದಲ್ಲಿ ಮುಂದುವರಿದ ಭಾರತೀಯರ ಕಗ್ಗೊಲೆ : ದುಷ್ಕರ್ಮಿ ಇರಿತಕ್ಕೆ ಪಂಜಾಬ್ ವ್ಯಕ್ತಿ ಬಲಿ
ಕ್ಯಾಲಿಫೋರ್ನಿಯ, ಮೇ 7– ಅಮೆರಿಕದಲ್ಲಿ ದುಷ್ಕರ್ಮಿಗಳ ಕ್ರೌರ್ಯಕ್ಕೆ ಭಾರತೀಯರ ಬಲಿಯಾಗುತ್ತಿರುವ ಪ್ರಕರಣಗಳು ಮತ್ತೆ ಮರುಕಳಿಸಿದೆ. ಸ್ಯಾನ್ಜೋಸ್ನಲ್ಲಿ ಹಂತಕನ ಗುಂಡಿಗೆ ಮಂಗಳೂರು ಮೂಲದ ದಂಪತಿ ಬಲಿಯಾದ ಬೆನ್ನಲ್ಲೇ, ಕ್ಯಾಲಿಫೋರ್ನಿಯಾದ ಮೊಡೆಸ್ಟೊ ನಗರದಲ್ಲಿ ಅಪರಿಚಿತನ ಚೂರಿ ಇರಿತಕ್ಕೆ ಪಂಜಾಬ್ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪಂಜಾಬ್ನ ಕಪುರ್ತಲಾ ಜಿಲ್ಲೆಯ ಜಗ್ಜಿತ್ ಸಿಂಗ್ (32) ಕೊಲೆಗೀಡಾದ ವ್ಯಕ್ತಿ. ಕಳೆದ ಒಂದೂವರೆ ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ್ದ ಸಿಂಗ್ ಅಂಗಡಿಯೊಂದನ್ನು ನಡೆಸುತ್ತಿದ್ದರು.
ಘಟನೆ ವಿವರ :
ಶುಕ್ರವಾರ ಸಂಜೆ ವ್ಯಕ್ತಿಯೊಬ್ಬ ಅಂಗಡಿಗೆ ಬಂದು ಸಿಗರೇಟ್ ಕೇಳಿದ. ನಿಯಮದ ಪ್ರಕಾರ ಗುರುತಿನ ಚೀಟಿ ನೀಡುವಂತೆ ಜಗಜಿತ್ ಸಿಂಗ್ ಆತನಿಗೆ ಹೇಳಿದರು. ಆತ ನೀಡಿದ ಐಡಿ ಪ್ರೂಫ್ ದೋಷಪೂರಿತವಾಗಿತ್ತು. ಸೂಕ್ತ ದಾಖಲೆ ನೀಡದಿದ್ದರೆ ಸಿಗರೇಟು ಕೊಡುವುದಿಲ್ಲ ಎಂದು ಸಿಂಗ್ ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿತ್ತು. ಎಚ್ಚರಿಕೆ ನೀಡಿ ಹಿಂದಿರುಗಿದ ಅಪರಿಚಿತ ವ್ಯಕ್ತಿ ರಾತ್ರಿ 11.50ರಲ್ಲಿ ಅಂಗಡಿಗೆ ಬಂದಾಗ. ಬಾಗಿಲು ಬಂದ್ ಮಾಡುತ್ತಿದ್ದ ಸಿಂಗ್ಗೆ ಚಾಕುವಿನಿಂದ ಬಲವಾಗಿ ತಿವಿದು ಪರಾರಿಯಾದ ಎಂದು ಅವರ ಭಾವ ಕೆ.ಎಸ್.ಚೀಮಾ ತಿಳಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸಿಂಗ್ರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಸುಮಾರು 10 ಗಂಟೆಗಳ ಕಾಲ ಸಾವು-ಬದುಕಿನೊಂದಿಗೆ ಹೋರಾಡಿದ ಅವರು ಶನಿವಾರ ರಾತ್ರಿ ಕೊನೆಯುಸಿರೆದರು. ಮೊಡೆಸ್ಟೋ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕನ ಸೆರೆಗೆ ವ್ಯಾಪಕ ಬಲೆ ಬೀಸಿದ್ದಾರೆ. ಸ್ಯಾನ್ಜೋಸ್ನಲ್ಲಿ ಮಂಗಳೂರಿನ ನರೇನ್ ಪ್ರಭು ದಂಪತಿ ಮೇಲೆ ಅವರ ಪುತ್ರಿಯ ಮಾಜಿ ಗೆಳೆಯ ಗುಂಡು ಹಾರಿಸಿ ಕೊಂದಿದ್ದನು. ಈ ಕೃತ್ಯದ ನಂತರ ಹಂತಕ ಪೊಲೀಸ್ ಗುಂಡಿಗೆ ಬಲಿಯಾದ್ದ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS