ಅಮೆರಿಕದಲ್ಲಿ ಯೋಗಥಾನ್  : 11000 ಮಂದಿಯಿಂದ ಸೂರ್ಯ ನಮಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Yogathon

ವಾಷಿಂಗ್ಟನ್,ಫೆ.21- ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ ಎಂಬ ಅರಿವು ಮೂಡಿಸುವ ಉದ್ದೇಶದಿಂದ ಹಿಂದೂ ಸ್ವಯಂ ಸೇವಕ ಸಂಘ ಅಮೆರಿಕದಲ್ಲಿ ಹಮ್ಮಿಕೊಂಡಿದ್ದ ಯೋಗಥಾನ್‍ನಲ್ಲಿ 11,000 ಮಂದಿ ಏಕಕಾಲಕ್ಕೆ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದಿದ್ದಾರೆ.   ಅಮೆರಿಕದ 27 ರಾಜ್ಯಗಳ 350ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹಿಂದೂ ಸ್ವಯಂ ಸೇವಕ ಸಂಘ ಹಮ್ಮಿಕೊಂಡಿದ್ದ ಯೋಗಥಾನ್‍ನಲ್ಲಿ ಮೇಯರ್‍ಗಳು, ಸೆನೆಟರ್‍ಗಳು, ಗೌರ್ನರ್‍ಗಳು, ಅಮೆರಿಕ ಕಾಂಗ್ರೆಸಿಗರು ಸೇರಿದಂತೆ 58ಕ್ಕೂ ಹೆಚ್ಚು ಜನಪ್ರತಿನಿಧಿಗಳು ಪಾಲ್ಗೊಂಡು ಗಮನ ಸೆಳೆದರು.

ಸ್ಥಳೀಯ ಜನಪ್ರತಿನಿಧಿಗಳಿಗೆ ಯೋಗಥಾನ್‍ನಲ್ಲಿ ಪಾಲ್ಗೊಳ್ಳುವ ಮೂಲಕ ಅಲ್ಲಿನ ನಿವಾಸಿಗಳಿಗೆ ಯೋಗದಿಂದ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.  ಯೋಗಥಾನ್ ಅಂಗವಾಗಿ 156 ಸ್ಥಳಗಳಲ್ಲಿ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಕಾರ್ಯಗಾರದಲ್ಲಿ 11254 ಮಂದಿ, 8,28,586 ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದಿದ್ದಾರೆ.   ಹಿಂದೂ ಸ್ವಯಂ ಸೇವಕ ಸಂಘ ಅಮೆರಿಕದಲ್ಲಿ ಕಳೆದ 2007ರಿಂದ ಯೋಗಥಾನ್ ನಡೆಸಿಕೊಂಡು ಬರುತ್ತಿದ್ದು , ಅಮೆರಿಕನ್‍ರಲ್ಲಿ ಭಾರತ ಮೂಲದ ಯೋಗದ ಬಗ್ಗೆ ಹೆಚ್ಚು ಆಸಕ್ತಿ ಉಂಟು ಮಾಡುತ್ತಿದೆ.

Facebook Comments

Sri Raghav

Admin