ಅಮೆರಿಕದ ಅಟಾರ್ನಿ ಪ್ರೀತ್ ಭರಾರ್ ವಜಾಗೊಂಡಿದ್ದು ಏಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Preeth

ವಾಷಿಂಗ್ಟನ್, ಮಾ.18-ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ಇತ್ತೀಚೆಗೆ ಭಾರತೀಯ ಮೂಲಕ ಅಮೆರಿಕದ ಅಟಾರ್ನಿ ಪ್ರೀತ್ ಭರಾರ್ ವಜಾಗೊಳ್ಳಲು ಕಾರಣವೇನು ಎಂಬ ಬಗ್ಗೆ ಅನೇಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಸಚಿವ ಟಾಮ್ ಪ್ರೈಸ್ ಅವರ ಖಾತೆಯ ವ್ಯವಹಾರಗಳಲ್ಲಿ ಕೇಳಿಬಂದ ಆರೋಪಗಳ ಬಗ್ಗೆ ಭರಾರ್ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲೇ ಅವರನ್ನು ವಜಾಗೊಳಿಸಲಾಗಿದೆ ಎಂದು ತನಿಖಾ ವಾರ್ತಾ ಮಾಧ್ಯಮವೊಂದು ಹೇಳಿದೆ.

ಸಚಿವರ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಷೇರು ವ್ಯವಹಾರಗಳಲ್ಲಿ ನಡೆದಿದ್ದ ಅಕ್ರಮ ಅವ್ಯವಹಾರಗಳ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಅವರನ್ನು ರಾಜೀನಾಮೆ ನೀಡಲು ನಿರಾಕರಿಸಿದ ನೆಪವೊಡ್ಡಿ ವಜಾಗೊಳಿಸಲಾಗಿದೆ ಎಂದು ನ್ಯೂಯಾರ್ಕ್ ಮೂಲದ ಸ್ವತ್ರಂತ ತನಿಖಾ ವರದಿ ಸಂಸ್ಥೆ ಪ್ರೋ-ಪಬ್ಲಿಕಾ ವರದಿ ಮಾಡಿದೆ. ಈ ತನಿಖಾ ವರದಿ ಬಗ್ಗೆ ಶ್ವೇತಭವನದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin