ಅಮೆರಿಕದ ಲಾಸ್ ಏಂಜೆಲಿಸ್‍ನ ರೆಸ್ಟೋರೆಂಟ್ ಶೂಟೌಟ್ : ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Shootout

ಲಾಸ್ ಏಂಜೆಲಿಸ್, ಅ.16-ಅಮೆರಿಕದ ಲಾಸ್ ಏಂಜೆಲಿಸ್‍ನ ರೆಸ್ಟೋರೆಂಟ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ವಾಗ್ವಾದ ವಿಕೋಪಕ್ಕೆ ಹೋಗಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಹತರಾಗಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ದಾಳಿ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಲಾಸ್ ಏಂಜೆಲಿಸ್ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ರೆಸ್ಟೋರೆಂಟ್ ಆಗಿ ಪರಿವರ್ತಿತವಾದ ಮನೆಯೊಂದರಲ್ಲಿ ತಡರಾತ್ರಿ ಮೋಜಿನ ಕೂಟವೊಂದು ನಡೆಯುತ್ತಿತ್ತು. ಜೊತೆಗೆ ಡಿಸ್ಕೋ ಜಾಕಿ ಕಾರ್ಯಕ್ರಮವೂ ಏರ್ಪಟ್ಟಿತ್ತು. ಇದೇ ವೇಳೆ ನಶೆಯಲ್ಲಿದ್ದ ಎರಡು ಗುಂಪುಗಳ ನಡುವೆ ಸಣ್ಣ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ನಂತರ ಅಲ್ಲಿಂದ ಹಿಂದಿರುಗಿದ ಓರ್ವ ಪುರುಷ ಮತ್ತು ಮಹಿಳೆ ಮತ್ತೆ ರೆಸ್ಟೋರೆಂಟ್‍ಗೆ ಬಂದಾಗ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಮೈಕ್ ಲೋಪೆಜ್ ಹೇಳಿದ್ದಾರೆ.

ಈ ಗುಂಡಿನ ದಾಳಿಯಲ್ಲಿ ಮೂವರು ಹತರಾಗಿ, 12 ಜನ ಗಾಯಗೊಂಡಿದ್ದು, ಹತ್ತಿರದ ತಾಳೆ ಮರಗಳಿಗೆ ಗುಂಡುಗಳು ಹೊಕ್ಕಿವೆ ಮತ್ತು ರೆಸ್ಟೋರೆಂಟ್ ರಕ್ತಮಯವಾಗಿದೆ ಎಂದು ಎಲ್‍ಎಪಿಡಿ ಸಾರ್ಜೆಂಟ್ ಫ್ರಾಂಕ್ ಪ್ರಿಸಿಯಾಡೋ ವಿವರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin