ಅಮೆರಿಕದ ವಾಯುದಾಳಿಯಲ್ಲಿ ಐಎಸ್ ಹಿರಿಯ ನಾಯಕ ಅಲ್-ಅದಾನಿ ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

Al-adnani

ವಾಷಿಂಗ್ಟನ್, ಆ.31- ಸಿರಿಯಾದಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಹಿರಿಯ ನಾಯಕ ಅಬು ಮಹಮದ್ ಅಲ್-ಅದಾನಿ ಹತನಾಗಿದ್ದಾನೆ.  ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ವಕ್ತಾರ ಹಾಗೂ ಬಾಹ್ಯ ಭಯೋತ್ಪಾದನೆ ಕಾರ್ಯಾಚರಣೆಗಳಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದ ಅಲ್-ಅದಾನಿ ಹತನಾಗಿದ್ದಾನೆ ಎಂದು ಐಎಸ್ ಪ್ರಕಟಿಸಿದೆ. ಅಲ್-ಬಾಬ್ ಪಟ್ಟಣದ ಬಳಿ ತಾನು ವಾಯುದಾಳಿ ನಡೆಸಿದ್ದಾಗಿ ತಿಳಿಸಿರುವ ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಇದನ್ನು ಖಚಿತಪಡಿಸಿಕೊಳ್ಳುತ್ತಿದೆ.
ಸಿರಿಯಾದ ಅಲೆಪ್ಪೊ ಪ್ರಾಂತ್ಯದಲ್ಲಿ ಸೇನಾ ಕಾರ್ಯಾಚರಣೆಯನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ಅಲ್-ಅದಾನಿ ಹುತಾತ್ಮರಾಗಿದ್ದಾರೆ ಎಂದು ಐಎಸ್ ನ್ಯೂಸ್ ಔಟ್ಲೆಟ್ ಅಮಾಖ್ ನಿನ್ನೆ ತಿಳಿಸಿದೆ.

ತನ್ನ ನಾಯಕನನ್ನು ಕೊಂದಿರುವ ಅಮೆರಿಕ ಸೇನೆ ಮೇಲೆ ಭಯಾನಕ ದಾಳಿ ನಡೆಸಿ ಸೇಡು ತೀರಿಸಿಕೊಳ್ಳುವುದಾಗಿ ಐಎಸ್ ಹೇಳಿದೆ.

► Follow us on –  Facebook / Twitter  / Google+

Facebook Comments

Sri Raghav

Admin