ಅಮೆರಿಕನ್ ಏರ್‍ಲೈನ್ಸ್ ವಿಮಾನದಲ್ಲಿ ಬೆಂಕಿ, 20 ಮಂದಿಗೆ ಗಾಯ, 169 ಮಂದಿ ಬಚಾವ್

ಈ ಸುದ್ದಿಯನ್ನು ಶೇರ್ ಮಾಡಿ

Chicago-Fire-Plane

ಚಿಕಾಗೋ, ಅ.29- ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಕನಿಷ್ಠ 20 ಮಂದಿ ಗಾಯಗೊಂಡಿರುವ ಘಟನೆ ಚಿಕಾಗೋದ ಓಹಾರೆ ಏರ್‍ಪೋರ್ಟ್‍ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಇದರಿಂದ ವಿಮಾನನಿಲ್ದಾಣದಲ್ಲಿ ಕೆಲಕಾಲ ಆತಂಕ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಿಬ್ಬಂದಿ ಸಮಯ ಪ್ರಜ್ಞೆಯಿಂದ 169 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದಕ್ಕೂ ಮುನ್ನ, ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಮತ್ತು ಡೊನಾಲ್ಡ್ ಟ್ರಂಪ್ ಪರಮಾಪ್ತ ಮೈಕ್ ಪೆನ್ಸ್ ಇದ್ದ ವಿಮಾನ ನ್ಯೂಯಾರ್ಕ್‍ನ ವಿಮಾನನಿಲ್ದಾಣದ ರನ್‍ವೇನಲ್ಲಿ ಆಯತಪ್ಪಿದ ಘಟನೆಯೂ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.

ಮಿಯಾಮಿಗೆ ತೆರಳಬೇಕಿದ್ದ ಅಮೆರಿಕನ್ ಏರ್‍ಲೈನ್ಸ್‍ನ ಬೋಯಿಂಗ್ 767 ವಿಮಾನವು ಚಿಕಾಗೋ ವಿಮಾನನಿಲ್ದಾಣದಿಂದ ಮೇಲೇರಲು ರನ್‍ವೇಯಲ್ಲಿ ಹೋಗುತ್ತಿದ್ದಾಗ ಬೆಂಕಿ ತಗುಲಿತು. ತಕ್ಷಣ ಎಚ್ಚೆತ್ತ ಸಿಬ್ಬಂದಿ ತುರ್ತು ನಿರ್ಗಮನ ದ್ವಾರಗಳ ಮೂಲಕ ಪ್ರಯಾಣಿಕರ ಪಾರಾಗಲು ಸೂಚಿಸಿದರು. ಎಮರ್ಜೆನಿ ಸ್ಲೈಡ್ ಮೂಲ ಪ್ರಯಾಣಿಕರು ನಿರ್ಗಮಿಸುವ ಸಂದರ್ಭದಲ್ಲಿ ಕನಿಷ್ಠ 20 ಮಂದಿ ಪ್ರಯಾಣಿಕರಿಗೆ ತರಚು ಗಾಯಗಳು ಮತ್ತು ಮೂಳೆಗೆ ಪೆಟ್ಟಾಗಿವೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.  ಈ ವಿಮಾನದಲ್ಲಿ 161 ಪ್ರಯಾಣಿಕರು ಮತ್ತು ಒಂಭತ್ತು ಮಂದಿ ಸಿಬ್ಬಂದಿ ಇದ್ದರು. ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ ವಿಮಾನದಲ್ಲಿ ಕೆಲಕಾಲ ಆತಂಕದ ಸನ್ನಿವೇಶ ಸೃಷ್ಟಿಯಾಗಿ ನಂತರ ತಿಳಿಗೊಂಡಿತು.

ಪ್ರಯಾಣಿಕರು ಮಿಯಾಮಿ ತಲುಪಲು ಸಾಧ್ಯವಾಗುವಂತೆ ಬೇರೆ ವಿಮಾನದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಅಮೆರಿಕನ್ ಏರ್‍ಲೈನ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.  ಅತ್ತ, ನ್ಯೂಯಾರ್ಕ್‍ನ ಲಾ ಗಾರ್ಡಿಯಾ ಏರ್‍ಪೋರ್ಟ್ ರನ್‍ವೇನಲ್ಲಿ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಮೈಕ್ ಪೆನ್ಸ್ ಇದ್ದ ವಿಮಾನ್ಲ ಆಯತಪ್ಪಿದ ಘಟನೆ ಸಹ ನಡೆದಿದೆ. ಈ ಆಚಾತುರ್ಯದಲ್ಲಿ ಯಾರಿಗೂ ಗಾಯಗಳಾಗಿಲ್ಲ ಏರ್‍ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin