ಅಮೆರಿಕ,ಬ್ರಿಟನ್, ಆಸ್ಟ್ರೇಲಿಯಾದಲ್ಲೂ ಘರ್ಜಿಸುತ್ತಿದೆ ‘ಜಾಗ್ವಾರ್’

ಈ ಸುದ್ದಿಯನ್ನು ಶೇರ್ ಮಾಡಿ

Jaguar-Kannad-Movie

ಬೆಂಗಳೂರು,ಅ.24- ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅದ್ಧೂರಿತನ ಹಾಗೂ ವಿಶಿಷ್ಟ ಪ್ರಯತ್ನದಿಂದ ಸಿನಿಮಾ ಪ್ರಿಯರ ಮನಸೂರೆಗೊಂಡಿರುವ ಜಾಗ್ವಾರ್ ಚಿತ್ರ ಇದೀಗ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ.  ನಾಯಕ ನಟ ನಿಖಿಲ್ ಕುಮಾರ್ ತಮ್ಮ ಮೊದಲ ಪ್ರಯತ್ನದಲ್ಲೆ ಯಶಸ್ಸು ಕಂಡಿದ್ದು , ಈ ಚಿತ್ರದ ನಟನೆ, ಹಾಡು, ನೃತ್ಯ, ಆ್ಯಕ್ಷನ್‍ಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಕಲೆಕ್ಷನ್‍ನಲ್ಲೂ ಭರ್ಜರಿಯಾಗೇ ಮುನ್ನುಗುತ್ತಿದೆ.  ತಮ್ಮ ಮಗನ ಚಿತ್ರರಂಗದ ಪಯಣಕ್ಕೆ ಸಾಕಷ್ಟು ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪರಿಶ್ರಮಕ್ಕೆ ಪ್ರತಿಫಲವೂ ಸಿಕ್ಕಂತಾಗಿದೆ. ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ ದಿನದಿಂದ ಚಿತ್ರ ತಂಡದೊಂದಿಗೆ ನಿರಂತರ ಸಂಪರ್ಕ ಹೊಂ ದಿದ್ದ ಕುಮಾರಸ್ವಾಮಿಯವರು ಚಿತ್ರೀ ಕರಣ ಆರಂಭವಾದ ಮೊದಲ ದಿನದಿಂದ ಮಗನ ಬೆನ್ನೆಲುಬಿಗೆ ನಿಂತು ಚಿತ್ರದ ಯಶಸ್ಸಿಗೆ ಮುನ್ನುಡಿ ಬರೆದರು.

ಈ ಎಲ್ಲ ಪರಿಶ್ರಮದ ಹಿನ್ನೆಲೆಯಲ್ಲಿ ಇಂದು ಚಿತ್ರ, ಕಥೆ, ಚಿತ್ರಕಥೆ, ನಿರ್ದೇಶನ, ನಟನೆ, ಆ್ಯಕ್ಷನ್ ಎಲ್ಲವೂ ಒಳಗೊಂಡಂತೆ ಒಂದು ಪರಿಪೂರ್ಣ ಚಿತ್ರವಾಗಿ ಅದ್ಧೂರಿತನದೊಂದಿಗೆ ಜನರನ್ನು ರಂಜಿಸುತ್ತಿದೆ. ಇದೀಗ ರಾಜ್ಯದ ಜನರೊಂದಿಗೆ ಈ ಚಿತ್ರವನ್ನು ಹೊರ ದೇಶದ ಕನ್ನಡಿಗರ ಮನ ತಣಿಸಲು ಮುಂದಾಗಿದೆ.  ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ ಮತ್ತು ಯುನೆಟೈಡ್ ಕಿಂಗ್‍ಡಮ್‍ಗಳಲ್ಲಿ ಒಟ್ಟು 45 ಸೆಂಟರ್‍ಗಳಲ್ಲಿ ಜಾಗ್ವಾರ್ ಚಿತ್ರ ತೆರೆ ಕಾಣಲಿದ್ದು , ಈ ಚಿತ್ರದ ಪ್ರಚಾರ ಕ್ಕಾಗಿ ನಟ ನಿಖಿಲ್ ಸೇರಿದಂತೆ ಇಡೀ ಕುಟುಂಬವೇ ಮುಂದಾಗಿದೆ.  ವಿದೇಶಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿರುವ ಕುಮಾರಸ್ವಾಮಿ ಯವರು ಉತ್ತಮ ಪ್ರಚಾರವನ್ನು ಕೈಗೊಂಡಿರುವುದರಿಂದ ಪಾಪುಲರ್ ನಟರಿಗೆ ಸಿಗುವಂತಹ ಸ್ವಾಗತವೇ ನಿಖಿಲ್‍ಗೂ ದೊರೆಯುತ್ತಿದೆ.

ತನ್ನ ಮೊದಲ ಚಿತ್ರದಲ್ಲೇ ಇಂತಹ ಯಶಸ್ಸು ತನ್ನದಾಗಿಸಿಕೊಂಡಿರುವ ನಿಖಿಲ್ ಸಹ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.  ಈ ಮಟ್ಟದ ಯಶಸ್ಸಿಗೆ ಕಾರಣ ಕರ್ತರಾದ ಕುಮಾರಸ್ವಾಮಿಯವರ ಕಾರ್ಯವೈಖರಿಯೂ ಇದಕ್ಕೆ ಕಾರಣ ಎನ್ನಬಹುದಾಗಿದ್ದು , ಚಿತ್ರ ಬಿಡುಗಡೆಯಾದಾಗಿನಿಂದ ಇದ್ದ ಗೊಂದಲಗಳು, ಚಿತ್ರಮಂದಿರಗಳ ತೊಂದರೆ ಸೇರಿದಂತೆ ಇನ್ನಿತರ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಂಡು ಚಿತ್ರ ಇಂದು ಮುನ್ನುಗುತ್ತಿದೆ.  ಈ ಮೂಲಕ ಜಾಗ್ವಾರ್ ಚಿತ್ರ ವಿದೇಶದಲ್ಲೂ ಕನ್ನಡದ ಬಾವುಟ ಹಾರಿಸಲು ಸಿದ್ದತೆ ನಡೆಸಿದ್ದು, ಮುಂದಿನ ದಿನಗಳಲ್ಲಿ
ಗಲ್ಫ್ ಹಾಗೂ ಆಸ್ಟ್ರೇಲಿಯಾಗಳಲ್ಲೂ ಪ್ರದರ್ಶನಗೊಳ್ಳಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin