ಅಮೆರಿಕ ಅಧ್ಯಕ್ಷನಾಗುವೆ : ಖ್ಯಾತ ಕುಸ್ತಿಪಟು, ಚಿತ್ರನಟ ಡ್ವಾಯ್ನ್ ಜಾನ್ಸನ್

ಈ ಸುದ್ದಿಯನ್ನು ಶೇರ್ ಮಾಡಿ

Actor--2

ಲಾಸ್ ಏಂಜಲೀಸ್, ಮೇ 12-ಅಮೆರಿಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಇಂಗಿತವನ್ನು ಖ್ಯಾತ ಕುಸ್ತಿಪಟು ಮತ್ತು ಜನಪ್ರಿಯ ಚಿತ್ರನಟ ಡ್ವಾಯ್ಸ್ ಜಾನ್ಸನ್ (ರಾಕ್) ವ್ಯಕ್ತಪಡಿಸಿದ್ದಾರೆ. ಅಮೆರಿಕ ಅತ್ಯುನ್ನತ ಹುದ್ದೆಗೆ ತಾವು ಸ್ಪರ್ಧಿಸಿದರೆ ಯಾರಿಗೂ ಅಚ್ಚರಿಯಾಗುವುದಿಲ್ಲ ಎಂದು 45 ವರ್ಷದ ನಟ ಜಿಕ್ಯೂ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಅಜಾನುಬಾಹು ನಟ ದಿ ಮಮ್ಮಿ ರಿಟನ್ರ್ಸ್, ದಿ ಸ್ಕಾರ್ಪಿಯನ್ ಕಿಂಗ್, ವಾಕಿಂಗ್ ಟಾಲ್, ಫಾಸ್ಟ್ ಅಂಡ್ ಫ್ಯೂರಿಯಸ್ ಸೇರಿದಂತೆ 35ಕ್ಕೂ ಹೆಚ್ಚು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜೊತೆ ಜಾನ್ಸನ್ ನಟಿಸಿರುವ ಬಹು ನಿರೀಕ್ಷಿತ ಬೇವಾಚ್ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin