‘ಅಮೆರಿಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಲು ಹಿಲರಿ ಫಿಟ್’ : ವೈದ್ಯರ ದೃಢೀಕರಣ

ಈ ಸುದ್ದಿಯನ್ನು ಶೇರ್ ಮಾಡಿ

Hillery

ವಾಷಿಂಗ್ಟನ್. ಸೆ. 15-ಅಮೆರಿಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಲು ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಮರ್ಥರಾಗಿದ್ದಾರೆ ಎಂದು ಅವರ ವೈದ್ಯೆ ಲಿಸಾ ಬಾಡ್ರ್ಯಾಕ್ ದೃಢೀಕರಣ ನೀಡಿದ್ದಾರೆ.   ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಆರೋಗ್ಯದ ಬಗ್ಗೆ ಮುಂದೆ ಉದ್ಭವಿಸಬಹುದಾದ ಪ್ರಶ್ನೆಗಳಿಗೆ ಕಡಿವಾಣ ಹಾಕುವ ಯತ್ನವಾಗಿ ವೈದ್ಯಕೀಯ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ.  ನ್ಯುಮೋನಿಯಾದಿಂದ ಚೇತರಿಸಿಕೊಂಡಿರುವ ಹಿಲರಿ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಸಮರ್ಥರಾಗಿದ್ದಾರೆ ಎಂದು ವೈದ್ಯರು ದೃಢೀಕರಿಸಿರುವ ವೈದ್ಯಕೀಯ ದಾಖಲೆಯನ್ನು ಇಂದು ಬಿಡುಗಡೆ ಮಾಡಲಾಗಿದೆ.  ಹಿಲರಿ ಅನಾರೋಗ್ಯದಿಂದ ನರಳುತಿದ್ದು, ಅವರು ಅಮೆರಿಕದ ಉನ್ನತ ಹುದ್ದೆ ಅಲಂಕರಿಸಲು ಅಸಮರ್ಥರು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಿಲರಿ ಈ ದೃಢೀಕರಣ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin