ಅಮೆರಿಕ ಅಧ್ಯಕ್ಷ ಒಬಾಮಾ ಪುತ್ರಿ ಈಗ ಹೋಟೆಲ್ ಸರ್ವರ್ ..!

ಈ ಸುದ್ದಿಯನ್ನು ಶೇರ್ ಮಾಡಿ

gdsagsg 

ಲಂಡನ್: 8 ವರ್ಷಗಳಿಂದ ಅಮೆರಿಕ ಅಧ್ಯಕ್ಷರ ನಿವಾಸ ವೈಟ್ಹೌಸ್ನಲ್ಲಿ ಐಷಾರಾಮಿ ಜೀವನದ ರುಚಿ ಉಂಡಿದ್ದ ಅಧ್ಯಕ್ಷ ಬರಾಕ್ ಒಬಾಮಾರ ಪುತ್ರಿ ಸಾಶಾ ಇದೀಗ ಜೀವನದ ನೈಜ ಅನುಭವಕ್ಕಾಗಿ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ್ದಾರೆ! ವಿಶ್ವದ ನಂ.1 ಬಲಾಡ್ಯ ರಾಷ್ಟ್ರದ ಅಧ್ಯಕ್ಷರ ಮಗಳು ಇಂಥದ್ದೊಂದು ಕೆಲಸ ಆಯ್ದುಕೊಂಡಿದ್ದು ಅಚ್ಚರಿಯಾದರೂ ಸತ್ಯ. ಸದ್ಯ ಸಾಶಾ ಬೇಸಿಗೆ ರಜೆಯಲ್ಲಿ ಇದ್ದಾಳೆ. ಹೀಗಾಗಿ ಈ ಸಮಯವನ್ನು ಹೊಸ ರೀತಿಯಲ್ಲಿ ಕಳೆಯಲು ಬಯಸಿರುವ ಸಾಶಾ, ನ್ಯಾನ್ಸೀಸ್ ರೆಸ್ಟೋರೆಂಟ್ ಎಂಬ ಫುಡ್ ಪಾಯಿಂಟ್ನಲ್ಲಿ ಸರ್ವರ್ ಕೆಲಸಕ್ಕೆ ಸೇರಿಕೊಂಡಿದ್ದಾರೆ. ರೆಸ್ಟೋರೆಂಟ್ನಲ್ಲಿ ಸಾಶಾಗೆ ಕರಿದ ಮೀನಿನ ಆಹಾರ, ಮಿಲ್ಕ್ ಶೇಕ್ ಪೂರೈಸುವ ಕೆಲಸ ನೀಡಲಾಗಿದೆ. ಸಾಶಾ ಮುಂಜಾನೆ ಹೊತ್ತಲ್ಲಿ 4 ಗಂಟೆಗಳ ಅವಧಿಗೆ ಈ ಕೆಲಸ ಮಾಡುತ್ತಿದ್ದಾಳೆ. ಸಾಶಾ ಸರ್ವರ್ ಕೆಲಸಕ್ಕೆ ಸೇರಿದ್ದರೂ, ಆಕೆ ಅಮೆರಿಕ ಅಧ್ಯಕ್ಷರ ಪುತ್ರಿಯಾದ ಕಾರಣ ಇಲ್ಲೂ ಆಕೆಗೆ 6 ಜನರ ಭದ್ರತೆ ಒದಗಿಸಲಾಗಿದೆ. 6 ಜನ ಭದ್ರತಾ ಸಿಬ್ಬಂದಿ, ಸಾಶಾ ಹೋಟೆಲ್ನಲ್ಲಿ ಕೆಲಸ ನಿರ್ವಹಿಸುವವರೆಗೂ ಅಲ್ಲೇ ಸುತ್ತಮುತ್ತ ಸಾಮಾನ್ಯ ಸಮವಸ್ತ್ರದಲ್ಲಿ ಇರುತ್ತಾರೆ.

Facebook Comments

Sri Raghav

Admin