ಅಮೆರಿಕ ಎಚ್ಚರಿಕೆಯನ್ನು ಗಾಳಿಗೆ ತೂರಿ ಮೇಲಕ್ಕೆ ಚಿಮ್ಮಿದ ಇರಾನ್ ಕ್ಷಿಪಣಿ

ಈ ಸುದ್ದಿಯನ್ನು ಶೇರ್ ಮಾಡಿ

Iran--01

ವಾಷಿಂಗ್ಟನ್/ಟೆಹ್ರಾನ್, ಸೆ.23-ವಿಶ್ವಸಂಸ್ಥೆ ಮತ್ತು ಅಮೆರಿಕ ಎಚ್ಚರಿಕೆಯನ್ನು ಲೆಕ್ಕಿಸದೇ ಸರಣಿ ಕ್ಷಿಪಣಿ ಮತ್ತು ಅಣ್ವಸ್ತ್ರಗಳನ್ನು ಪ್ರಯೋಗಿಸುತ್ತಾ ಉತ್ತರ ಕೊರಿಯಾ ತೊಡೆ ತಟ್ಟಿರುವಾಗಲೇ, ಮತ್ತೊಂದು ಹಠಮಾರಿ ದೇಶ ಇರಾನ್ ಸಹ ಅದೇ ಹಾದಿ ಹಿಡಿದಿದೆ. ಅಮೆರಿಕ ಧಮಕಿ ಹಾಕಿದ್ದರೂ ಹೆದರದೇ ಇರಾನ್ ಇಂದು ಹೊಸ ಮಧ್ಯಂತರ ಶ್ರೇಣಿಯ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಖೋರಂಶಾರ್ ಕ್ಷಿಪಣಿಯನ್ನು ಉಡಾವಣೆ ಮಾಡಿದ ದೃಶ್ಯ ಸರ್ಕಾರಿ ಟೆಲಿವಿಷನ್‍ನಲ್ಲಿ ಬಿತ್ತರವಾಗಿದೆ.

ಹಲವಾರು ಸಿಡಿತಲೆಗಳನ್ನು ಒಯ್ಯುವ ಸಾಮಥ್ರ್ಯವಿರುವ ಹಾಗೂ 2,000 ಕಿ.ಮೀ. ವ್ಯಾಪ್ತಿಯ ನೂತನ ಖಂಡಾಂತರ ಕ್ಷಿಪಣಿಯೊಂದನ್ನು ಇರಾನ್ ಅನಾವರಣಗೊಳಿಸಿದೆ ಎಂದು ನಿನ್ನೆಯಷ್ಟೇ ತಸ್ನೀಮ್ ವಾರ್ತಾ ಸಂಸ್ಥೆ ವರದಿ ಮಾಡಿತ್ತು.  ರಾಜಧಾನಿ ಟೆಹ್ರಾನ್‍ನಲ್ಲಿ ನಡೆದ ಸೇನಾ ಪಥಸಂಚಲನ ನೇಪಥ್ಯದಲ್ಲಿ ಇರಾನ್ ಸೇನೆ ರೆವಲ್ಯೂಷನರಿ ಗಾರ್ಡ್‍ನ ವಾಯು ವಿಭಾಗದ ಮುಖ್ಯಸ್ಥ ಅಮಿರಾಲಿ ಹಝಿಯಾದೆ ಈ ವಿಷಯ ತಿಳಿಸಿದರು ವರದಿ ಹೇಳಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin