ಅಮೆರಿಕ ಕಾಲ್ ಸೆಂಟರ್ ಹಗರಣದಲ್ಲಿ ಶಾಮೀಲಾಗಿರುವುದಾಗಿ ತಪ್ಪೋಪ್ಪಿಕೊಂಡ ಭಾರತೀಯ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

US-call-center-scam
ವಾಷಿಂಗ್ಟನ್, ಮೇ 19-ಅಮೆರಿಕದಲ್ಲಿ ನಡೆದ ಬಹು ದಶಲಕ್ಷ ಡಾಲರ್ ಕಾಲ್ ಸೆಂಟರ್ ಹಗರಣದಲ್ಲಿ ತಾನು ಶಾಮೀಲಾಗಿರುವುದಾಗಿ 46 ವರ್ಷದ ಭಾರತೀಯ ಮಹಿಳೆಯೊಬ್ಬಳು ಒಪ್ಪಿಕೊಂಡಿದ್ದಾಳೆ. ಇದರೊಂದಿಗೆ ತಪ್ಪಿತಸ್ಥರ ಸಂಖ್ಯೆ ವೃದ್ದಿಯಾಗುತ್ತಲೇ ಇದೆ. ಭಾರತದಲ್ಲಿರುವ ಕಾಲ್ ಸೆಂಟರ್‍ಗಳನ್ನು ಬಳಸಿಕೊಂಡು ಅಮೆರಿಕನ್ನರನ್ನು ವಂಚಿಸಿದ್ದಲ್ಲದೆ ವಲಸೆ ಅಧಿಕಾರಿಗಳನ್ನೂ ತಪ್ಪುದಾರಿಗೆ ಎಳೆದ ಆರೋಪವನ್ನು ಈಕೆ ಎದುರಿಸುತ್ತಿದ್ದಾಳೆ ಟೆಕ್ಸಾಸ್‍ನ ದಕ್ಷಿಣ ಜಿಲ್ಲಾ ನ್ಯಾಯಾಧೀಶ ಡೇವಿಡ್ ಹಿಟ್ನರ್ ಅವರ ಮುಂದೆ ನೀಲಂ ಪರೇಖ್ ತಾನು ಈ ಹಗರಣದಲ್ಲಿ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದಾಗಿ ತಪ್ಪೋಕೊಂಡಿದ್ದಾಳೆ. ನೀಲಂ ಜೊತೆ ಇತರ ಮೂವರೂ ಸಹ ದೋಷಿ ಎಂಬುದು ಸಾಬೀತಾಗಿದೆ.ನೂರಾರು ಅಮೆರಿಕನ್ನರನ್ನು ಗುರಿಯಾಗಿಟ್ಟುಕೊಂಡು ತೆರಿಗೆ ಬಾಕಿ ನೆಪದಲ್ಲಿ ಕಾಲ್‍ಸೆಂಟರ್‍ಗಳಿಂದ ಕರೆ ಮಾಡಿ ಲಕ್ಷಾಂತರ ಡಾಲರ್‍ಗಳನ್ನು ಕಾನೂನುಬಾಹಿರವಾಗಿ ವಸೂಲಿ ಮಾಡಿದ್ದ ಆರೋಪದ ಮೇಲೆ ನ್ಯೂಜೆರ್ಸಿ ನಿವಾಸಿ ಹರ್ಷ್ ಪಟೇಲ್‍ನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ದೊಡ್ಡ ಹಗರಣದಲ್ಲಿ ಶಾಮೀಲಾದ ತಪ್ಪನ್ನು ಒಪ್ಪಿಕೊಳ್ಳುತ್ತಿರುವ  ಭಾರತೀಯರ ಪಟ್ಟಿ ಬೆಳೆಯುತ್ತಲೇ ಇದೆ.  ಈವರೆಗೂ ಹರ್ಷ್ ಪಟೇಲ್, 55 ಮಂದಿ ಹಾಗೂ ಭಾರತೀಯ ಮೂಲದ ಐದು ಕಾಲ್ ಸೆಂಟರ್‍ಗಳ ವಿರುದ್ದ ವಂಚನೆ, ಹಣ ದುರ್ಬಳಕೆ, ವಲಸೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿಕೆ ಮೊದಲಾದ ಆರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin