ಅಮೆರಿಕ ಜನತೆಯ ಕ್ಷಮೆ ಯಾಚಿಸಿದ ‘ಪೋಲಿ’ ಡೊನಾಲ್ಡ್ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump

ವಾಷಿಂಗ್ಟನ್, ಅ.8- ಈಗಾಗಲೇ ತೆರಿಗೆ ವಂಚನೆ ವಿವಾದದ ಸುಳಿಗೆ ಸಿಲುಕಿರುವ ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 2005ರಲ್ಲಿ ನಡೆಸಿದ ಪೋಲಿ ಸಂಭಾಷಣೆಯ ವಿಡಿಯೋ ಬಯಲಾಗಿದೆ. ಇದರಿಂದ ಮತ್ತೊಮ್ಮೆ ಮುಜುಗರಕ್ಕೀಡಾದ ಟ್ರಂಪ್ ಅಮೆರಿಕ ಜನತೆಯ ಕ್ಷಮೆ ಯಾಚಿಸಿದ್ದಾರೆ.  ವಾಷಿಂಗ್ಟನ್ ಫೋಸ್ಟ್‍ಗೆ ಈ ವಿಡಿಯೋ ಲಭಿಸಿದ್ದು, ಮಹಿಳೆಯರ ಬಗ್ಗೆ ಟ್ರಂಪ್ ಅತ್ಯಂತ ಅಶ್ಲೀಲವಾಗಿ ಸಂಭಾಷಣೆ ನಡೆಸಿರುವ ತುಣುಕುಗಳಿವೆ. ನಾನು ಅವರಿಗೆ ಚುಂಬಿಸಲು ಆರಂಭಿಸಿದೆ ತಡ ಮಾಡಲು ನನ್ನಲ್ಲಿ ತಾಳ್ಮೆ ಇರಲಿಲ್ಲ. ನೀವೊಬ್ಬ ಖ್ಯಾತ ವ್ಯಕ್ತಿಯಾದರೆ ಇದನ್ನು ಮಾಡಲು ಅವರೇ ನಿಮಗೆ ಅನುಮತಿ ನೀಡುತ್ತಾರೆ ಎಂದು ಟ್ರಂಪ್ ಹೇಳಿದ್ದು ದಾಖಲಾಗಿದೆ.

ಸಂಭಾಷಣೆ ವೇಳೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟ್ರಂಪ್ ತಾವು ಮಹಿಳೆಯರ ಜೊತೆ ಚುಂಬನ, ಸ್ಪರ್ಶ, ಅಂಗಾಂಗ ಮರ್ದನಗಳಂಥ ಚೇಷ್ಟೆಗಳನ್ನು ನಡೆಸಿ, ಮಿಲನಕ್ಕೂ ಯತ್ನಿಸಿದ್ದಾಗಿ ಹೇಳಿರುವ ಪೋಲಿ’ಸಂಭಾಷಣೆಗಳು ಮೈಕ್ರೋಫೋನ್‍ನಲ್ಲಿ ದಾಖಲಾಗಿದೆ.  ಅಮೆರಿಕದ ಕೋಟ್ಯಧಿಪತಿ 70 ವರ್ಷಗಳ ಟ್ರಂಪ್ 11 ವರ್ಷಗಳ ಹಿಂದೆ ನಡೆಸಿದ ಪೋಲಿ’ ಸಂಭಾಷಣೆ ಬಯಲಾಗುತ್ತಿದ್ದಂತೆ ತೀವ್ರ ಮುಖಭಂಗಕ್ಕೆ ಒಳಗಾದರು. ಇದಕ್ಕಾಗಿ ನಾನು ಅಮೆರಿಕದ ಜನತೆಯ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುವ ಟ್ರಂಪ್ ಜನಪ್ರಿಯತೆಗೆ ಇದು ಧಕ್ಕೆ ಉಂಟು ಮಾಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin