‘ಅಮೆರಿಕ ಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್‍ ಗೆಲುವು ಗ್ಯಾರಂಟಿ’

ಈ ಸುದ್ದಿಯನ್ನು ಶೇರ್ ಮಾಡಿ

hillary-clinton

ಬೆಂಗಳೂರು,ಅ.28- ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಗೆಲುವು ಸಾಧಿಸಲಿದ್ದಾರೆ ಎಂದು ಇಂಡಿಯಾ ಡೆವಲಪ್‍ಮೆಂಟ್ ಫೌಂಡೇಷನ್ ನಿರ್ದೇಶಕ ಇ.ಪಿ.ಮೆನನ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಅಮೆರಿಕಕ್ಕೆ ಹೋಗಿ ಹಿಲರಿ ಕ್ಲಿಂಟನ್ ಪರವಾಗಿ ಪ್ರಚಾರ ಮಾಡಿ ಬಂದಿದ್ದೇವೆ. ನ್ಯೂಯಾರ್ಕ್, ನ್ಯೂಜೆರ್ಸಿ, ಕ್ಯಾಲಿಪೋರ್ನಿಯಾ, ಟೆಕ್ಸಾಸ್, ವರ್ಜೀನಿಯಾ, ನ್ಯೂ ಮೆಕ್ಸಿಕೋ ಮತ್ತಿತರೆಡೆ ಪ್ರಚಾರ ಮಾಡಿದ್ದೇನೆ. ಎಲ್ಲೆಡೆ ಹಿಲರಿ ಪರವಾಗಿ ಜನರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಅಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟು ಜನ ಶೋಷಣೆಗೆ ಒಳಗಾಗಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಕ್ಕಳು ಕೈನಲ್ಲಿ ಗನ್ ಹಿಡಿದು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇಂತಹುದ್ದೆಲ್ಲ ತೊಲಗಬೇಕು ಎಂದು ಹಿಲರಿ ಕ್ಲಿಂಟನ್ ಆಶಿಸಿದ್ದಾರೆ. ಇದೇ ಮೊದಲ ಬಾರಿಗೆ ಅಮೆರಿಕದ ಇತಿಹಾಸದಲ್ಲಿ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಅವರಿಗೆ ಅಲ್ಲಿನ ಜನ ಉತ್ತಮವಾಗಿ ಸಹಕರಿಸಿ ಅವರನ್ನೇ ಅಧ್ಯಕ್ಷರನ್ನಾಗಿಸುವ ಮಾತನಾಡುತ್ತಿದ್ದಾರೆ. ನಾನು ಕೂಡ ನಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ತೆರಳಿ ಹಿಲರಿ ಕ್ಲಿಂಟನ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin