ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಐಎಸ್ ನಾಯಕ ಹಫೀಜ್ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

hafeezವಾಷಿಂಗ್ಟನ್,ಆ.13- ಪ್ರಕ್ಷುಬ್ದಮಯ ದಕ್ಷಿಣ ಆಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಕುಖ್ಯಾತ ಭಯೋತ್ಪಾದನೆ ಸಂಘಟನೆ ಐಎಸ್‍ಐಎಸ್‍ನ ನಾಯಕ ಹಫೀಜ್ ಸೈಯದ್ ಖಾನ್ ಮತ್ತು ಆತನ ಹಿರಿಯ ಭಂಟ ಹತರಾಗಿದ್ದಾರೆ. ಹಫೀಜ್ ಖಾನ್ ಆಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದ ಇಸ್ಲಾಮಿಕ್ ಸ್ಟೇಟ್‍ನ ಶಾಖೆಯ ಉನ್ನತ ನಾಯಕನಾಗಿದ್ದ. ಈತ ಹತನಾಗಿರುವುದು ಭಯಾನಕ ಉಗ್ರವಾದಿಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ತಿಳಿಸಿದೆ.   ಹಫೀಝ್ ಖಾನ್ ಅಮೆರಿಕ ಮತ್ತು ಮಿತ್ರ ಪಡೆಗಳ ಮೇಲೆ ನಡೆದ ಆಕ್ರಮಣಗಳಲ್ಲಿ ನೇರವಾಗಿ ಪಾಲ್ಗೊಂಡಿದ್ದನು.   ಅಫ್ಘಾನಿಸ್ತಾನ ದಕ್ಷಿಣ ನಂಗರ್‍ಹಾರ್‍ನಲ್ಲಿ ಐಸಿಸ್ ವಿರುದ್ಧ ಅಮೆರಿಕ ಮತ್ತು ಆಫ್ಘಾನ್ ವಿಶೇಷ ಕಾರ್ಯಾಚರಣೆ ಪಡೆಗಳು ಜಂಟಿ ಕಾರ್ಯಾಚರಣೆ ಮುಂದುವರೆಸಿವೆ.

► Follow us on –  Facebook / Twitter  / Google+c

Facebook Comments

Sri Raghav

Admin