ಅಮೆರಿಕ : ನಾಯಕತ್ವ ಸಮಾವೇಶಕ್ಕೆ ವನಿತಾ ಗುಪ್ತಾ ಅಧ್ಯಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Vanitha-Gupta

ವಾಷಿಂಗ್ಟನ್, ಮಾ.28 – ಭಾರತ ಮೂಲದ ಅಮೆರಿಕ ಮಹಿಳೆ ವನಿತಾ ಗುಪ್ತಾ ಅವರನ್ನು ಅಮೆರಿಕದ ನಾಗರಿಕ ಮತ್ತು ಮಾನವ ಹಕ್ಕುಗಳ ಕುರಿತ ನಾಯಕತ್ವ ಸಮಾವೇಶದ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ನೇಮಕ ಮಾಡಲಾಗಿದೆ. ಈ ಪ್ರತಿಷ್ಠಿತ ಸಂಸ್ಥೆಗೆ ಮಹಿಳೆಯೊಬ್ಬರು ಮುಖ್ಯಸ್ಥೆಯಾಗಿರುವುದು ಇದೇ ಮೊದಲು.   ನಾಗರಿಕ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ನಿರ್ಭೀತ ನಿಲುವು ವ್ಯಕ್ತಪಡಿಸುವಲ್ಲಿ ಗುರುತಿಸಿಕೊಂಡಿರುವ 41 ವರ್ಷದ ವನಿತಾ, ಎರಡು ದಶಕಗಳ ಕಾಲ ಈ ಹುದ್ದೆಯಲ್ಲಿದ್ದ ವೇಡ್ ಹೆಂಡೆರ್‍ಸನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಆಡಳಿತದಲ್ಲಿ ವನಿತಾ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin