ಅಮೆರಿಕ ಮೇಲೆ ದಾಳಿ ನಡೆಸಲು ಅಭ್ಯಾಸ ಮಾಡುತ್ತಿದ್ದೇವೆ : ಕಿಮ್ ಜಾಂಗ್ ಉನ್

ಈ ಸುದ್ದಿಯನ್ನು ಶೇರ್ ಮಾಡಿ

America-Attack

ಪಯೊಂಗ್‍ಯಾಂಗ್/ಟೋಕಿಯೊ, ಮಾ.7-ಜಪಾನ್‍ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ದಾಳಿ ನಡೆಸಲು ನಾವು ಅಭ್ಯಾಸ ಮಾಡುತ್ತಿದ್ದೇವೆ. ನಿನ್ನೆ ನಡೆದ ಕ್ಷಿಪಣಿ ಪ್ರಯೋಗ ಕೂಡ ಇದೇ ಉದ್ದೇಶ ಹೊಂದಿತ್ತು ಎಂದು ಉತ್ತರ ಕೊರಿಯಾ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಚ್ಚರಿಕೆಯನ್ನು ಧಿಕ್ಕರಿಸಿ ಉತ್ತರ ಕೊರಿಯಾ ನಿನ್ನೆ ನಾಲ್ಕು ನಿಷೇಧಿತ ಮಾರಕ ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕ್ಷಿಪಣಿ ನಿಖರ ಗುರಿ ತಲುಪಬೇಕೆಂಬ ಬಗ್ಗೆ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದರು ಎಂದು ಮಾಧ್ಯಮಗಳು ಹೇಳಿವೆ.

ಉತ್ತರ ಕೊರಿಯಾದ ಕ್ಷಿಪಣಿ ಉಡ್ಡಯನ ತಾಲೀಮು ಬಗ್ಗೆ ಪ್ರತಿಕ್ರಿಯಿಸಿದ ಕಿಮ್, ಹೌದು ಅಮೆರಿಕ ಮೇಲೆ ದಾಳಿಗಾಗಿ ನಾವು ಅಭ್ಯಾಸ ಮಾಡುತ್ತಿದ್ದೇವೆ. ನಿನ್ನೆ ನಡೆದ ಪರೀಕ್ಷೆಯೂ ಇದೇ ಗುರಿಯನ್ನು ಹೊಂದಿತ್ತು. ಜಪಾನ್‍ನಲ್ಲಿರುವ ಅಮೆರಿಕ ಸೇನಾ ನೆಲೆಯನ್ನು ಅಪ್ಪಳಿಸುವ ಗುರಿಯೊಂದಿಗೆ ಈ ಪ್ರಯೋಗ ನಡೆದಿತ್ತು ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin