ಅಮೆರಿಕ ಸೇನಾ ನೆಲೆ ಬಳಿ ತಾಲಿಬಾನ್ ಉಗ್ರರಿಂದ ಕಾರ್‍ಬಾಂಬ್ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

Taliban--01

ಬೋಸ್ತ್, ಏ.25-ಆಫ್ಘಾನಿಸ್ತಾನದ ಪೂರ್ವ ರಾಜ್ಯ ಬೋಸ್ತ್‍ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ತಾಲಿಬಾನ್ ಉಗ್ರರು ಕಾರ್ ಬಾಂಬ್ ಸ್ಫೋಟಿಸಿದ್ದಾರೆ. ಈ ದಾಳಿ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.   ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ರಾಜಧಾನಿ ಕಾಬೂಲ್‍ಗೆ ಭೇಟಿ ನೀಡಿದ ದಿನದಂದೇ ಈ ದಾಳಿ ನಡೆದಿರುವುದು ಗಮನಾರ್ಹ. ಅಮೆರಿಕ ಯೋಧರು ಮತ್ತು ಖಾಸಗಿ ಸೇನಾ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿರುವ ಕ್ಯಾಂಪ್ ಚಾಪ್‍ಮನ್ ಗುಪ್ತ ನೆಲೆಯ ಪ್ರವೇಶ ದ್ವಾರದಲ್ಲಿ ಬಂಡುಕೋರರು ಕಾರ್‍ಬಾಂಬ್ ಸ್ಫೋಟಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin