ಅಮೇರಿಕಾದಲ್ಲಿ ಭಾರತೀಯ ಉದ್ಯೋಗಿಗಳ ರಕ್ಷಣೆಗೆ ಡಿಸ್ನಿ ಕಂಪನಿ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

America-01

ವಾಷಿಂಗ್ಟನ್, ಡಿ.16-ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಉದ್ಯೋಗ ಆಕಾಂಕ್ಷಿಗಳಾದ ಭಾರತೀಯರಿಗೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಸರ್ಕಾರದಿಂದ ಯಾವುದೇ ತೊಂದರೆಯಾಗದು ಎಂದು ಡಿಸ್ನಿ ಕಂಪನಿ ಆಭಯ ನೀಡಿದೆ.   ನಮ್ಮ ದೇಶದ ಉದ್ಯೋಗಿಗಳ ನೌಕರಿಯನ್ನು ಕಿತ್ತುಕೊಳ್ಳಲು ಎಚ್1-ಬಿ ವೀಸಾ ಹೊಂದಿರುವ ವಿದೇಶಿ ನೌಕರರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂಬ ಟ್ರಂಪ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಡಿಸ್ನಿ ಕಂಪನಿ ಅಮೆರಿಕದ ನೌಕರರು ಮತ್ತು ಭಾರತೀಯ ಉದ್ಯೋಗಿಗಳಿಗೆ ತೊಂದರೆಯಾಗದಂತೆ ಹೊಸ ನೌಕರಿ ವಿಧಾನವನ್ನು ಅನುಸರಿಲಾಗಿದೆ. ಸ್ಥಳೀಯರಿಗೆ ಆದ್ಯತೆ ನೀಡುವ ಜೊತೆಗೆ ವಿದೇಶಗಳ ಪ್ರತಿಭಾನ್ವಿತರಿಗೆ ಎಂದಿನಂತೆ ಸ್ವಾಗತ ಇದೆ ಎಂದು ಕಂಪನಿಯು ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಡಿಸ್ನಿ ವಲ್ರ್ಡ್ ಸೇರಿದಂತೆ ಅಮೆರಿಕದ ಇತರ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿರುವ ಅಸಂಖ್ಯಾತ ಭಾರತೀಯರನ್ನು ಪರೋಕ್ಷವಾಗಿ ಉಲ್ಲೇಖಿದ್ದ ಟ್ರಂಪ್ ನಮ್ಮವರ ನೌಕರಿ ಕಸಿದುಕೊಳ್ಳಲು ಅನ್ಯ ರಾಷ್ಟ್ರೀಯರಿಗೆ ಆಸ್ಪದ ನೀಡುವುದಿಲ್ಲ ಎಂದು ತಿಳಿಸಿದ್ದರು.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin