ಅಮೇರಿಕಾದಿಂದ 480 ಕೋಟಿ ರೂ. ವೆಚ್ಚದಲ್ಲಿ ಅಣ್ವಸ್ತ್ರ ಪ್ರತಿರೋಧಕ ಉಡುಪು ಖರೀದಿ

ಈ ಸುದ್ದಿಯನ್ನು ಶೇರ್ ಮಾಡಿ

Anti-nuclear

ನವದೆಹಲಿ/ವಾಷಿಂಗ್ಟನ್, ಮೇ 13-ಭಾರತಕ್ಕೆ 75 ದಶಲಕ್ಷ ಡಾಲರ್ ವೆಚ್ಚದ (480 ಕೋಟಿ ರೂ.ಗಳು) ರಾಸಾಯನಿಕ, ಜೈವಿಕ, ರೇಡಿಯೋ ವಿಕಿರಣ ಮತ್ತು ಅಣ್ವಸ್ತ್ರ ರಕ್ಷಣಾ (ಸಿಬಿಆರ್‍ಎನ್) ಸೂಟ್‍ಗಳು ಮತ್ತು ಸಾಧನಗಳನ್ನು ಮಾರಾಟ ಮಾಡಲು ಅಮೆರಿಕ ಸಮ್ಮತಿಸಿದೆ.   ರಾಸಾಯನಿಕ, ಜೈವಿಕ ಅಥವಾ ಅಣ್ವಸ್ತ್ರಗಳ ಸಂಭವನೀಯ ದಾಳಿಗಳನ್ನು ನಿಭಾಯಿಸಲು, ನಿಯಂತ್ರಿಸಲು ಹಾಗೂ ತಪ್ಪಿಸುವ ಉದ್ದೇಶದಿಂದ ಭಾರತದ ಖರೀದಿ ಪ್ರಸ್ತಾವನೆಗೆ ಅಮೆರಿಕ ಒಪ್ಪಿಗೆ ಸೂಚಿಸಿದೆ.ಈ ಸೂಟ್‍ಗಳು (ಮುಖವಾಡ ಮತ್ತು ಉಡುಪು ಸೇರಿ) ವಿಷಾನಿಲ, ರಾಸಾಯನಿಕ ಮತ್ತು ಅಣ್ವಸ್ತ್ರಗಳ ಭೀಕರ ಪರಿಣಾಮಗಳಿಂದ ರಕ್ಷಣೆ ನೀಡುತ್ತವೆ.   ಇಸ್ಲಾಮಿಕ್ ಸ್ಟೇಟ್ (ಐಎಸ್) ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರು ವಿಷಾನಿಲ ಮತ್ತು ಅಪಾಯಕಾರಿ ರಾಸಾಯನಿಕ (ಸರಿನ್) ಬಳಸಿ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಭಾರತ ಈ ಸೂಟ್‍ಗಳನ್ನು ಹೊಂದಲು ನಿರ್ಧರಿಸಿ ಅಮೆರಿಕಕ್ಕೆ ಕೋರಿಕೆ ಸಲ್ಲಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin