ಅರಣ್ಯವಾಸಿಗಳು ಹೋರಾಟ ಮೂಲಕ ಹಕ್ಕು ತಮ್ಮ ಪಡೆದುಕೊಳ್ಳಬೇಕು

ಈ ಸುದ್ದಿಯನ್ನು ಶೇರ್ ಮಾಡಿ

hunsur

ಹುಣಸೂರು, ಆ.24- ಅನಾದಿಕಾಲದಿಂದಲೂ ಅರಣ್ಯವಾಸಿಗಳಾಗಿ ಕಾಡು ರಕ್ಷಣೆಯ ಜೊತೆಗೆ ಸುಖಿ ಜೀವನ ನಡೆಸುತ್ತಿದ್ದ ಆದಿವಾಸಿಗಳನ್ನು ಪುನರ್ವಸತಿ ಹೆಸರಿನಲ್ಲಿ ಎತ್ತಂಗಡಿ ಮಾಡಿ ಪುನರ್ವಸತಿ ಕಲ್ಪಿಸಿ ಮೂಲಭೂತ ಸೌಲಭ್ಯ ಕಲ್ಪಿಸದಿದ್ದರಿಂದ ಬದುಕು ಅತಂತ್ರವಾಗಿದ್ದು, ಹೋರಾಟದ ಮೂಲಕವೇ ಎಲ್ಲವನ್ನು ಪಡೆದುಕೊಳ್ಳಬೇಕಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಗಣೇಶ್ ವಿಷಾದಿಸಿದರು.  ತಮ್ಮ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ನಾಗಾಪುರ ಪುನರ್ವಸತಿ ಕೇಂದ್ರದ ಆದಿವಾಸಿಗಳು ಆಯೋಜಿಸಿರುವ ಕಾಲ್ನಡಿಗೆ ಜಾಥಾಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್‌ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಅರಣ್ಯ ಇಲಾಖೆ ಹುಲಿ ಸಂರಕ್ಷಣೆ ನೆಪದಲ್ಲಿ ಕಾಡಿನಿಂದ ಹೊರತಂದು ಅತಂತ್ರರನ್ನಾಗಿಸಿದೆ.

ಪ್ರತಿವರ್ಷ ರಾಜ್ಯ ಸರಕಾರ 16 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಆದರೆ ಅಭಿವೃದ್ದಿ ಮಾತ್ರ ಕಾಣುತ್ತಿಲ್ಲ, ಬುಡಕಟ್ಟು ಜನರ ಬದುಕು ಮಾತ್ರ ಯಥಾಸ್ಥಿತಿಯಲ್ಲಿದೆ. ಕಾಯ್ದೆ ಜಾರಿಯಾದಾಗಿನಿಂದ ಕೇವಲ 18 ಸಾವಿರ ಗಿರಿಜನ ಕುಟುಂಬಗಳಿಗೆ ಮಾತ್ರ ಭೂಮಿ ಹಕ್ಕು ನೀಡಿದೆ. ಮಂತ್ರಿಗಳು ಬರೀ ಹೇಳಿಕೆ ನೀಡಿದರೆ ಸಾಲದು ಕಡ್ಡಾಯವಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಮಿತಿಯ ರಾಜ್ಯ ಸಹ ಸಂಚಾಲಕ ಗುರುಶಾಂತ್ ಮಾತನಾಡಿ ಸಂವಿಧಾನದಲ್ಲಿ, ಅರಣ್ಯ ಮಾನ್ಯತಾ ಹಕ್ಕು 2006ರ ಪ್ರಕಾರ ಆದಿವಾಸಿಗಳನ್ನು ಕಾಡಿನಿಂದ ಹೊರ ಹಾಕದೆ ಇರುವಲ್ಲಿಯೇ ಪುನರ್ವಸತಿ ಕಲ್ಪಿಸಬೇಕೆಂದಿದ್ದರೂ ವಿಫಲವಾಗಿದೆಎಂದರು.
ಜಾಥಾದಲ್ಲಿ ತಾಲೂಕು ಸಂಚಾಲಕ ಜೆ.ಕೆ.ತಿಮ್ಮಣ , ತಾಲೂಕು ಕಾರ್ಯದರ್ಶಿ ಸಂಜಯ್, ಮುಖಂಡರಾದ ಶಾಂತ, ಜೆ.ಕೆ.ಮಣಿ, ಸೀತಾ, ಸಾವಿತ್ರಿ, ಚೆಲ್ಲಿ, ಪವಿತ್ರ, ಸುಮಿತ್ರ, ಸಿ.ಪಿ.ಐ.ಎಂ.ನ ಜಿಲ್ಲಾ ಕಾರ್ಯದರ್ಶಿ ಬಸವರಾಜು, ಸಮಿತಿಯ ರಾಜ್ಯ ಸಹಸಂಚಾಲಕ ವಿ.ಬಸವರಾಜ್ ಕಲ್ಕುಣಿಕೆ, ಜಗದೀಶ್‌ಸೂರ್ಯ ಭಾಗವಹಿಸಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin