ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

forest-job

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ, ಮೋಜಣಿದಾರ, ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕ ಹುದ್ದೆಗಳಿಗೆ ಕ್ರೀಡಾ ಕೋಟಾದಡಿ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 54
ಹುದ್ದೆಗಳ ವಿವರ
1.ಉಪವಲಯ ಅರಣ್ಯಾಧಿಕಾರಿ ಕಮ್ ಮೋಜಣಿದಾರ – 10
2.ಅರಣ್ಯ ರಕ್ಷಕ – 30
3.ಅರಣ್ಯ ವೀಕ್ಷಕ – 14
ವಿದ್ಯಾರ್ಹತೆ : ಪದವಿ ಪಡೆದಿರಬೇಕು. ಅರ್ಹತೆಯ ವಿಷಯಗಳಿಗೆ ಅಧಿಕೃತ ಅಧಿಸೂಚನೆ ಗಮನಿಸಿ.
ವಯೋಮಿತಿ : ಮೂರು ಹುದ್ದೆಗಳಿಗೂ ಕನಿಷ್ಠ 18 ವರ್ಷ ನಿಗದಿಯಾಗಿದ್ದು, ಗರಿಷ್ಠ ವಯೋಮಿತಿಯನ್ನು ಕ್ರ.ಸಂ 1ರ ಹುದ್ದೆಗೆ 25, 3ರ ಹುದ್ದೆಗೆ 27, 1ರ ಹುದ್ದೆಗೆ 30 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಪ.ಜಾ, ಪ.ಪಂ, ಪ್ರವರ್ಗ-01 ಮತ್ತು ಹಿಂದುಳಿದ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಮಾನ್ಯ ಮತ್ತು ಹಿಂದುಳಿದವರಿಗೆ 100+15 ರೂ ಸೇವಾ ತೆರಿಗೆ + ಜಿಎಸ್‍ಟಿ, ಪ.ಜಾ, ಪ.ಪಂ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 50+15 ರೂ ಸೇವಾ ತೆರಿಗೆ + ಜಿಎಸ್ಟಿ ಸೇರಿದಂತೆ ಎಲ್ಲಾ ಒಟ್ಟು ಶುಲ್ಕವನ್ನು ಅಂಚೆ ಕಚೇರಿಯ ಇ ಪೇಮೆಂಟ್ ಮೂಲಕ ಪಾವತಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-02-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.aranya.gov.in ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin