ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳನ್ನು ಬೇಟಿಯಾಡುತ್ತಿದ್ದವನ ಬಂಧನ , ನಾಡ ಬಂದೂಕು ವಶ

ಈ ಸುದ್ದಿಯನ್ನು ಶೇರ್ ಮಾಡಿ

malavalli-forest

ಮಳವಳ್ಳಿ, ಮಾ.22- ಬಸವನಬೆಟ್ಟ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಹೊಂಗೆ ಬೋರೆ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಯಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಕನಕಪುರ ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ಹಲಗೂರು ಸಮೀಪದ ಬಸವನಹಳ್ಳಿ ವಾಸಿಯಾದ ನಿಂಗರಾಜು ಎಂಬಾತನೇ ಬಂಧಿತ ಆರೋಪಿಯಾಗಿದ್ದು ಈ ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಇದೇ ಗ್ರಾಮದ ಪ್ರಕಾಶ ಹಾಗೂ ದಿಲೀಪ ಎಂಬುವರ ಬಂಧನಕ್ಕೆ ಅರಣ್ಯ ಸಿಬ್ಬಂದಿ ಬಲೆ ಬೀಸಿದ್ದಾರೆ. ಬಂಧಿತ ಆರೋಪಿಯಿಂದ ಒಂದು ನಾಡ ಬಂದೂಕು  ಹಾಗೂ ಹಣೆಗೆ ಕಟ್ಟಿಕೊಳ್ಳುವ ಒಂದು ಬ್ಯಾಟರಿಯನ್ನು ಸಹ ವಶಪಡಿಸಿಕೊಂಡಿದ್ದಾರೆ.
ಮೊನ್ನೆ ರಾತ್ರಿ ಅರಣ್ಯ ಇಲಾಖಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಆರೋಪಿಯು ಕೈಯಲ್ಲಿ ಬಂದೂಕು ಹಿಡಿದು ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಎನ್ನಲಾಗಿದೆ.

ಕೂಡಲೇ ಆತನನ್ನು ವಶಕ್ಕೆ ಪಡೆದ ಸಿಬ್ಬಂದಿ ವಿಚಾರ ಣೆ ನಡೆಸಿದಾಗ ತನ್ನ ಸಹಚರರ ಜೊತೆ ಸೇರಿ ಮಾಂಸಕ್ಕಾಗಿ ಪ್ರಾಣಿಗಳ ಬೇಟೆಯಾಡುತ್ತಿದ್ದುದ್ದಾಗಿ ತಿಳಿಸಿದನೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಮಳವಳ್ಳಿ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಪ್ರವೀಣ್‍ಕುಮಾರ್, ಅರಣ್ಯ ರಕ್ಷಕ ವಿನಯ್ ಇಟ್ನಾಳ್, ಅರಣ್ಯ ವೀಕ್ಷಕರಾದ ಶ್ರೀಕಂಠ, ಚೇತು, ಮಾಯಪ್ಪ, ಮುನಿಮುತ್ತು ಇತರರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin