ಅರಮನೆಗೆ ಆಗಮಿಸಿದ ಗಜಪಡೆ : ಮೈಸೂರಲ್ಲಿ ದಸರಾಗೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

S-Dasara

ಮೈಸೂರು, ಆ.24- ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.  ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಆನೆಗಳಿಗೆ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದ ಬಳಿ ಶೆಡ್ ನಿರ್ಮಾಣ ಮಾಡಲಾಗಿದೆ.  ಆನೆಗಳೊಂದಿಗೆ ಬಂದಿರುವ ಮಾವುತರು ಹಾಗೂ ಕಾವಾಡಿಗಳಿಗೂ ಆನೆಗಳ ಶೆಡ್ ಸಮೀಪವೇ ಶೆಡ್ ನಿರ್ಮಿಸಿಕೊಡಲಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅರ್ಜುನ ಸೇರಿದಂತೆ ಆರು ಆನೆಗಳು ಹುಣಸೂರಿನ ವೀರನಹೊಸಹಳ್ಳಿ ಅರಣ್ಯದಿಂದ ಆಗಮಿಸಿ ನಗರದ ಅಲೋಕದಲ್ಲಿ ವಾಸ್ತವ್ಯ ಹೂಡಿದ್ದು, ಪ್ರತಿನಿತ್ಯ ಆರೈಕೆ ಮಾಡಲಾಗುತ್ತಿದೆ.  ಆನೆಗಳನ್ನು ಆ.26ರಂದು ಮೈಸೂರು ಅರಮನೆಗೆ ಕರೆತರಲಾಗುತ್ತದೆ. ಈಗ ಆರು ಆನೆಗಳೊಂದಿಗೆ ಒಟ್ಟು ಎಂಟು ಕುಟುಂಬಗಳು ಬಂದಿದ್ದು, ಇದೇ ಪ್ರಥಮ ಬಾರಿಗೆ ಸಿಮೆಂಟ್ನಿಂದ ಪ್ಲಾಟ್ಫಾರಂ ಮಾಡಿ ಅದರ ಮೇಲೆ ಶೆಡ್ ನಿರ್ಮಿಸಲಾಗಿದೆ.

ಕಳೆದ ವರ್ಷ ಮಳೆ ಬಂದಾಗ ಶೆಡ್ಗಳಿಗೆ ನೀರು ನುಗ್ಗಿ ಮಾವುತರು ಹಾಗೂ ಕಾವಾಡಿಗಳ ಕುಟುಂಬ ತೊಂದರೆ ಅನುಭವಿಸಿದ್ದರಿಂದ ಈ ಬಾರಿ ಮುಂಜಾಗರೂಕತೆಯಿಂದ ಸಿಮೆಂಟ್ ಪ್ಲಾಟ್ಫಾರಂ ಹಾಕಲಾಗಿದೆ.  ಹನ್ನೆರಡು ಆನೆಗಳ ಪೈಕಿ ಅರ್ಜುನ, ಗೌರಿ, ಲಕ್ಷ್ಮಿಯನ್ನು ಹೊರತುಪಡಿಸಿ ಉಳಿದ ಒಂಬತ್ತು ಆನೆಗಳನ್ನು ಒಂದೇ ಕಡೆ ಇರಿಸಲಾಗುತ್ತದೆ.  ಅರ್ಜುನ ತುಂಟು ಸ್ವಭಾವದವನಾದುದ್ದರಿಂದ ಗೌರಿ, ಲಕ್ಷ್ಮಿಯೊಂದಿಗೆ ಅರಮನೆ ಆವರಣದಲ್ಲೇ ಇರುವ ಭುವನೇಶ್ವರಿ ದೇವಾಲಯದ ಹಿಂಭಾಗ ಕೋಡಿ ನಂಜುಂಡೇಶ್ವರ ದೇವಾಲಯದ ಆವರಣದಲ್ಲಿ ಇರಿಸಲಾಗುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin