ಅರವಿಂದ ಜಾಧವ್ ವಿರುದ್ಧ ಸಿಬಿಐ ತನಿಖೆಯಾಗಬೇಕು : ಎಸ್.ಆರ್.ಹಿರೇಮಠ

ಈ ಸುದ್ದಿಯನ್ನು ಶೇರ್ ಮಾಡಿ

S-S.R.Hiremut

ಹುಬ್ಬಳ್ಳಿ ಆ24-ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ ಭೂಹಗರಣದಲ್ಲಿತೊಡಗಿದ್ದು, ಅವರ ವಿರುದ್ಧ ಸಿಬಿಐ ತನಿಖೆಯಾಗಬೇಕುಎಂದು ಸಮಾಜ ಪರಿವರ್ತನ ಸಂಘಟನೆಯ ಎಸ್. ಆರ್. ಹಿರೇಮಠ ಆಗ್ರಹಿಸಿದರು.  ಅವರುಇಂದು ಹುಬ್ಬಳ್ಳಿಯಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿ, ಭೂಹಗರಣದಆರೋಪ  ಹೊತ್ತಿರುವಅರವಿಂದಜಾಧವಅವರನ್ನುತನಿಖೆಯಾಗುವವರೆಗೆಅಮಾನತ್ ಮಾಡಬೇಕು.ಮುಖ್ಯ ಕಾರ್ಯದರ್ಶಿ ಆಡಳಿತ ವ್ಯವಸ್ಥೆದುರುಪಯೋಗ ಮಾಡಿಕೊಂಡುತಮ್ಮತಾಯಿತಾರಾಬಾಯಿ ಮಾರುತಿರಾವ್ಜಾಧವಅವರ ಹೆಸರಲ್ಲಿ ಕಾನೂನು ಬಾಹೀರವಾಗಿ 8.20 ಎಕರೆ ಭೂಮಿ ಖರೀದಿಸಿದ್ದಾರೆ.ರಾಮನಾಯಕನಹಳ್ಳಿ ಸರ್ಜಾಪೂರ ಹೊಬಳಿ ಆನೇಕಲ್ಲುತಾಲೂಕಿನಒಟ್ಟು 76 ಎಕರೆ ಸರ್ಕಾರಿ ಭೂಮಿಇದ್ದು, ಇದರಲ್ಲಿತಮ್ಮ ಪ್ರಭಾವ ಬಳಸಿ ಆನೇಕಲ್ ತಹಶೀಲ್ದಾರ ಮೂಲಕ ಸರ್ಕಾರಿ ಭೂಮಿಯನ್ನುತಮ್ಮತಾಯಿ ಹೆಸರಲ್ಲಿ ಖರೀದಿಸಿದ್ದಾರೆ.

ಸರ್ಕಾರಇಂತ ಹೀನ ಕೆಲಸ ಮಾಡಿದಅಕಾರಿಯನ್ನುಅಕಾರದಲ್ಲಿ ಮುಂದುವರೆಸಿದ್ದು ಏಕೆ?ಪ್ರಕರಣಕುರಿತು ಹಲ್ಲಿಲ್ಲದ ಹಾವಿನಂತಿರುವ ಲೋಕಾಯುಕ್ತ ಮುಚ್ಚಿ, ವಿಶೇಷ ತನಿಖಾ ದಳ ರಚಿಸಿದ್ದು ಯಾಕೆಎಂದು ಪ್ರಶ್ನಿಸಿದರು.ಸರ್ಕಾರಕ್ಕೆಜನರಪರ ಕೆಲಸ ಮಾಡುವ ಇಚ್ಛಾಶಕ್ತಿ ಕಡಿಮೆಯಾಗಿದೆ.ಜನತೆಇಟ್ಟಿರುವ ವಿಶ್ವಾಸಕ್ಕಾದರೂ ಮನ್ನಿಸಿ ಭ್ರಷ್ಟ ಸಚಿವರು ಹಾಗೂ ಅಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ಪತ್ರಿಕಾಗೋಷ್ಠಿಯಲ್ಲಿಆಯ್.ಜಿ.ಪುಲ್ಲಿ, ಎಂ. ಸಿ. ಹಾವೇರಿ, ರಾಘವೇಂದ್ರ ಕುಷ್ಟಗಿ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin