ಅರಸೀಕೆರೆ ತಿರಂಗೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಕಾರ್ಯಕರ್ತರು

ಈ ಸುದ್ದಿಯನ್ನು ಶೇರ್ ಮಾಡಿ

arasikere-tiranga

ಅರಸೀಕೆರೆ, ಆ.24- ತಾಲೂಕು ಬಿಜೆಪಿ ಘಟಕದ ವತಿಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ತಿರಂಗೋತ್ಸವ ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಬೈಕ್ ರ್ಯಾ ಲಿ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು. ನಗರದ ಜ್ಯೂನಿಯರ್ ಕಾಲೇಜು ಮುಂಭಾಗ ತಿರಂಗೋತ್ಸವಕ್ಕೆ ಮಾಜಿ ಶಾಸಕ ಎ.ಎಸ್.ಬಸವರಾಜು ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ(206) ಬಿಎಚ್ ರಸ್ತೆ ಮಾರ್ಗವಾಗಿ ತಾಲೂಕು ಕಚೇರಿವರೆಗೂ ರಾಷ್ಟ್ರ ಧ್ವಜವನ್ನಿಡಿದು ದೇಶಾಭಿಮಾನ ಸಾರುವ ಘೋಷಣೆ ಕೂಗುತ್ತ ರ್ಯಾ ಲಿಯಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು.

ತಾಲೂಕು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜಕುಮಾರ್ ಮಾತನಾಡಿ, ನಾಡಿನ ಯು ಸಮುದಾಯಕ್ಕೆ ದೇಶಾಭಿಮಾನ ಸಾರುವ ಸಲುವಾಗಿ ಬಿಜೆಪಿ ರಾಷ್ಟ್ರವ್ಯಾಪಿ ತಿರಂಗೋತ್ಸವ ಹಮ್ಮಿಕೊಂಡಿದೆ ಎಂದು ಹೇಳಿದರು. ಜಿಲ್ಲಾ ಬಿಜೆಪಿ ನಿಕಟಪೂರ್ವ ವಕ್ತಾರ ಎನ್.ಡಿ.ಪ್ರಸಾದ್ ಮಾತನಾಡಿ, ದೇಶಕ್ಕೆ ಬೆನ್ನು- ಶತ್ರು ರಾಷ್ಟ್ರಕ್ಕೆ ಎದೆ ತೋರಿಸುತ್ತ ಹಗಲಿರುಳೆನ್ನದೆ ದೇಶ ವಾಸಿಗಳನ್ನು ಕಾಯುತ್ತಿರುವ ಯೋಧರಿಗೆ ಗೌರವ ಸಮರ್ಪಿಸುವುದು ಹಾಗೂ ನಮ್ಮ ರಾಷ್ಟ್ರಧ್ವಜದ ಕೀರ್ತಿಯನ್ನು ಜಗತ್ತಿಗೆ ಸಾರುವ ಸದುದ್ದೇಶದಿಂದ ಈ ತಿರಂಗೋತ್ಸವ ಆಯೋಜಿಸಿದ್ದಾಗಿ ತಿಳಿಸಿದರು.

ನಿವೃತ್ತ ಸೈನಿಕರಾದ ವರದಕೃಷ್ಣ, ಉಮೇಶ್ ಮತ್ತು ಪ್ರಸ್ತುತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನವೀನ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು.  ರ್ಯಾ ಲಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮೈಲನಹಳ್ಳಿ ರಾಜಣ್ಣ, ನಗರಾಧ್ಯಕ್ಷ ಪುಟ್ಟನಕಟ್ಟೆ ದಿನೇಶ್, ಕಾರ್ಯದರ್ಶಿ ಶಿವನ್ರಾಜು, ಸುಭಾಶ್, ತಾಲೂಕು ಯುವಮೋರ್ಚಾ ಅಧ್ಯಕ್ಷ ರಮೇಶ್, ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚನಹಳ್ಳಿ ಪ್ರಸನ್ನಕುಮಾರ್, ಸುಬ್ರಮಣ್ಯ, ಕಟ್ಟೇಹಳ್ಳಿ ನವೀನ್, ಶಶಿಧರ್ ಮತ್ತಿತರರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin