ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ನಿಗೂಢ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Arunachal-Pradesh-CM

ಇಟಾನಗರ, ಆ.9-ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ (47) ಅವರ ಮೃತದೇಹ ಇಂದು ಬೆಳಿಗ್ಗೆ ಇಲ್ಲಿನ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಇಂದು ಬೆಳಗ್ಗೆ 8 ಅಥವಾ 9 ಗಂಟೆ ಸುಮಾರಿನಲ್ಲಿ ಈ ಸಾವು ಸಂಭವಿಸಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.  ಕಲಿಖೋ ಪುಲ್ ಸ್ವತಃ ಅವರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಹೇಗೆ ಎಂಬುದು ಇನ್ನೂ ಕೂಡ ನಿಗೂಢವಾಗಿದೆ.  ಆದರೆ ಅವರ ಸಮೀಪವರ್ತಿಗಳ ಪ್ರಕಾರ ಅವರು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ತನಿಖೆಯಿಂದ ನಂತರವಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ.

ಬಿಜೆಪಿ ಶಾಸಕರಾಗಿದ್ದ ಕಲಿಖೋ ಪುಲ್ ಅವರು ಪಕ್ಷದ ಶಾಸಕರು ಹಾಗೂ ಕಾಂಗ್ರೆಸ್ ಬಂಡಾಯ ಶಾಸಕರ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಕಳೆದ ತಿಂಗಳಷ್ಟೆ ಅಧಿಕಾರ ವಹಿಸಿಕೊಂಡಿದ್ದರು. 70 ಮಂದಿ ಸದಸ್ಯ ಬಲದ ವಿಧಾನಸಭೆಯಲ್ಲಿ 40 ಜನ ಶಾಸಕರ ಬಹುಮತ ಹೊಂದಿ ಸರ್ಕಾರ ರಚಿಸಿದ್ದ ಪೇಮಾಖಂಡು ಅವರನ್ನು ಪದಚ್ಯುತಿಗೊಳಿಸಿ ಕಲಿಖೋ ಪುಲ್ ಮುಖ್ಯಮಂತ್ರಿಯಾಗಿದ್ದರು.  ನಂತರ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅವರು ಅಧಿಕಾರದಿಂದ ಕೆಳಗಿಳಿದಿದ್ದರು. ಇದಾದನಂತರ ಅವರು ತುಂಬಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Facebook Comments

Sri Raghav

Admin