ಅರುಷಿ ಕೊಲೆ ಪ್ರಕರಣದಲ್ಲಿ ತಲ್ವಾರ್ ದಂಪತಿ ಖುಲಾಸೆ

ಈ ಸುದ್ದಿಯನ್ನು ಶೇರ್ ಮಾಡಿ

Arushi-01

ಅಲಹಾಬಾದ್/ನವದೆಹಲಿ,ಅ.12-ಇಡೀ ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಅರುಷಿ ಮತ್ತು ಹೇಮರಾಜ್ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆಕೆಯ ತಂದೆತಾಯಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿ ಇಂದು ಮಹತ್ವದ ತೀರ್ಪು ನೀಡಿದೆ.
ಅರುಷಿ ತಂದೆ ರಾಜೇಶ್ ಮತ್ತು ತಾಯಿ ನೂಪುರ್ ತಲ್ವಾರ್ ಅವರನ್ನು ದೋಷಿಗಳೆಂದು ಸಿಬಿಐ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಇಂದು ವಜಾಗೊಳಿಸಿ ದಂಪತಿಯನ್ನು ಆರೋಪ ಮುಕ್ತಗೊಳಿಸಿತು.

2008ರಲ್ಲಿ ತಮ್ಮ ಮಗಳು ಅರುಷಿ ಮತ್ತು ಮನೆಗೆಲಸ ಹೇಮರಾಜ್ ಕೊಲೆಯಾಗಿದ್ದರು. ಈ ಪ್ರಕರಣ ದೇಶಾದ್ಯಂತ ಸಾಕಷ್ಟು ವಿವಾದ ಸೃಷಿಸಿತ್ತು. ತನಿಖೆ ನಡೆಸಿದ ಸಿಬಿಐ ಈ ಕೊಲೆ ಹಿಂದೆ ಅರುಷಿಯ ಹೆತ್ತವರೇ ಶಾಮೀಲಾಗಿದ್ದಾರೆ ಆರೋಪಿಸಿತ್ತು.  ಈ ಕುರಿತು ವಿಚಾರಣೆ ನಡೆಸಿದ್ದ ಸಿಬಿಐ ನ್ಯಾಯಾಲಯ ನೂಪರ್ ದಂಪತಿಗಳಿಗೆ ಜೈಲು ಶಿಕ್ಷೆ ವಿಧಿಸಿತ್ತು. ಈ ಆರೋಪಿಗಳು ಘಜಿಯಾಬಾದ್‍ನ ದಾಸ್ನಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.   ತಮ್ಮ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಇವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ದಂಪತಿಯನ್ನು ಆರೋಪ ಮುಕ್ತಗೊಳಿಸಿ ಖುಲಾಸೆಗೊಳಿಸಲು ಆದೇಶಿಸಿದೆ.

Facebook Comments

Sri Raghav

Admin